Video : ಅಪ್ಪು ಆಸ್ಪತ್ರೆಗೆ ಹೋಗುತ್ತಿರುವ ಕೊನೆಯ ಗಳಿಗೆ ಸಿಸಿಟಿವಿಯಲ್ಲಿ ಸೆರೆ
ಬೆಂಗಳೂರು : ಖ್ಯಾತ ನಟ ಪುನೀತ್ ರಾಜಕುಮಾರ್ ದಿನಾಂಕ 29 ರಂದು ಮನೆಯಿಂದ ಆಸ್ಪತ್ರೆಗೆ ಹೋದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಅಪ್ಪುವಿನ ಕೊನೆಯ ದೃಶ್ಯ ನೋಡುಗರ ಕಣ್ಣಲ್ಲಿ ನೀರುತರಿಸುತ್ತದೆ.
ಜಿಮ್ ನಲ್ಲಿ ವ್ಯಾಯಾಮ ಮಾಡುತ್ತಿರುವಾಗ ಅಪ್ಪುಗೆ ಆಯಾಸವಾಗುತ್ತದೆ. ಈ ಸಂದರ್ಭದಲ್ಲಿ ಪತ್ನಿ ಜೊತೆ ಮನೆಯಿಂದ ವೈದ್ಯರ ಬಳಿ ತೆರಳುತ್ತಾರೆ. ಒಬ್ಬರೇ ನಡೆದುಕೊಂಡು ಮನೆ ಹೊರಗೆ ಬಂದ ಅಪ್ಪು ಕಾರಲ್ಲಿ ಕುಳಿತುಕೊಳ್ಳುತ್ತಾರೆ. ನಂತರ ನಡೆದದ್ದು ವಿಧಿಯ ಆಟ.
ಒಟ್ಟಿನಲ್ಲಿ ಅಪ್ಪು ಇಲ್ಲದ ದಿನಗಳನ್ನು ಅವರ ಅಭಿಮಾನಿಗಳು ಸೇರಿದಂತೆ ಕರುನಾಡ ಜನರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆರೋಗ್ಯದ ಕಡೆ ಹೆಚ್ಚು ಗಮನ ನೀಡುತ್ತಿದ್ದ ಅಪ್ಪು ಈಗ ಇಲ್ಲ ಎನ್ನುವುದು ನೋವಿನ ಸಂಗತಿ.