VIDEO – ಎಸಿಬಿ ದಾಳಿಗೆ ಹೆದರಿ ನಡು ರಸ್ತೆಯಲ್ಲೇ ಓಡಿದ ಪಿಎಸ್‍ಐ ನನ್ನು ಹಿಡಿದ ಸಾರ್ವಜನಿಕರು
ತುಮಕೂರು : ಸಾಮಾನ್ಯವಾಗಿ ಕಳ್ಳರನ್ನು ಹಿಡಿಯಲು ಪೊಲೀಸರು ಓಡುವುದು ಸಹಜ ಆದರೆ ಇಲ್ಲೊಬ್ಬ ಪಿಎಸ್ಐ ಎಸಿಬಿ ದಾಳಿಯಿಂದ ತಪ್ಪಿಸಿಕೊಂಡು ನಡು ರಸ್ತೆಯಲ್ಲೇ ಓಡಿ ಹೋಗಿದ್ದು ಸಾರ್ವಜನಿಕರೇ ಹಿಡಿದು ಕೊಟ್ಟ ಘಟನೆ ನಡೆದಿದೆ.
ಹೌದು ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಸಿ.ಎಸ್.ಪುರ ಠಾಣೆ ಪಿಎಸ್ಐ ಸೋಮಶೇಖರ್ ಎಸ್. ಪರಾರಿಯಾದ ಅಧಿಕಾರಿ. ಬುಧವಾರ ಮಧ್ಯಾಹ್ನ ಎಸಿಬಿ ಅಧಿಕಾರಿಗಳು ಪೊಲೂಸ್ ಠಾಣೆ ಮೇಲೆ ದಾಳಿ ಮಾಡಿದ್ದರು. ಈ ಸಂದರ್ಭದಲ್ಲಿ ಪಿಎಸ್ಐ ಹಾಗೂ ಮುಖ್ಯ ಪೇದೆ ನಯಾಜ್ ಅಹಮ್ಮದ್ ಅಧಿಕಾರಿಗಳ ಬಲೆಗೆ ಬಿದ್ದದ್ದರು. ನಂತರ ಎಸಿಬಿ ಅಧಿಕಾರಿಗಳು ಊಟ ಮಾಡುತ್ತಿರುವಾಗ ಪಿಎಸ್ಐ ಪರಾರಿಯಾಗಿದ್ದಾನೆ.
Video : ಅಪ್ಪು ಆಸ್ಪತ್ರೆಗೆ ಹೋಗುತ್ತಿರುವ ಕೊನೆಯ ಗಳಿಗೆ ಸಿಸಿಟಿವಿಯಲ್ಲಿ ಸೆರೆ : https://belagavivoice.com/appu_last_video/#.YYI90aVtecA.whatsapp
ದಾಳಿ ಹಿನ್ನಲೆ : ಕೌಟುಂಬಿಕ ಕಲಹದ ವಿಚಾರವಾಗಿ ಕಳೆದ ತಿಂಗಳು 22ರಂದು ಸಿ.ಎಸ್ ಪುರ ಠಾಣೆಯಲ್ಲಿ ಚಂದ್ರಣ್ಣ ಎಂಬವರ ವಿರುದ್ಧ ದೂರು ದಾಖಲಾಗಿತ್ತು. ಪೊಲೀಸರು ಚಂದ್ರಣ್ಣನ ಕಾರು ವಶಪಡಿಸಿಕೊಂಡಿದ್ದರು. ಹೀಗಾಗಿ ಚಂದ್ರಣ್ಣ ಅವರು ಕೋರ್ಟಿನಲ್ಲಿ ಜಾಮೀನು ಪಡೆದು ಕಾರು ಬಿಡಿಸಿಕೊಳ್ಳಲು ಬಂದಿದ್ದರು. ಆದರೆ ಪಿಎಸ್‍ಐ, ಕಾರು ಬಿಡಲು 28 ಸಾವಿರ ಹಣಕ್ಕೆ ಬೇಡಿಕೆ ಇಟ್ಡಿದ್ದು, ಮುಖ್ಯ ಪೇದೆ ನಯಾಜ್ ಅಹಮದ್ ಮೂಲಕ ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು. ಈ ಸಂದರ್ಭದಲ್ಲಿ ಎಸಿಬಿ ದಾಳಿ ಮಾಡಿದೆ.