
ಬಿಗ್ ಬಾಸ್ ಟ್ರೋಫಿ ಗೆದ್ದ ಹನುಮಂತ..!

ಬೆಂಗಳೂರು : ಕನ್ನಡ ಬಿಗ್ ಬಾಸ್ ಫಿನಾಲೆ ವಾರ ಮುಕ್ತಾಯದ ಹಂತ ತಲುಪಿದ್ದು ಈ ಬಾರಿ ಬಿಗ್ ಬಾಸ್ ಕಿರೀಟಿ ಹೊತ್ತುಕೊಳ್ಳುವಲ್ಲಿ ನಮ್ಮ ಉತ್ತರ ಕರ್ನಾಟಕ ಹೈದ ಹನುಮಂತ ಯಶಸ್ವಿ ಯಾಗಿದ್ದಾರೆ.
ತನ್ನ ಸಂಗೀತದ ಮೂಲಕ ಜನರ ಮನಸ್ಸು ಗೆದ್ದ ಹನುಮಂತ ಈ ಬಾರಿ ಬಿಗ್ ಬಾಸ್ ಪಟ್ಟ ಗೆದ್ದಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ಪಡೆದ ಹನುಮಂತ ತನ್ನ ಚಾಣಾಕ್ಷತನದಿಂದ ರಾಜ್ಯದ ಜನರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದ.
ಸಧ್ಯ ಬಿಗ್ ಬಾಸ್ ನಲ್ಲಿ ಹನುಮಂತ ಮೊದಲನೇ ಸ್ಥಾನ ಪಡೆದುಕೊಂಡಿದ್ದು ಎರಡನೇ ಸ್ಥಾನವನ್ನು ತ್ರಿವಿಕ್ರಮ ಪಡೆದುಕೊಂಡಿದ್ದಾರೆ. ಇನ್ನೂ ಮೂರನೇ ಸ್ಥಾನಕ್ಕೆ ರಜತ್ ತೃಪ್ತಿ ಪಟ್ಟುಕೊಂಡಿದ್ದಾರೆ.
