
ಬಿಗ್ ಬಾಸ್ ಸೀಜನ್ 10 ರ ವಿನ್ನರ್ ಡ್ರೋಣ್ ಪ್ರತಾಪ್ ?

ಕನ್ನಡ ಬಿಗ್ ಬಾಸ್ ಸೀಜನ್ 10 ರ ಪಟ್ಟ ಗೆದ್ದ ಆಟಗಾರ ಡ್ರೋಣ್ ಪ್ರತಾಪ್ ಅವರು ಎಂದು ಹೇಳಲಾಗುತ್ತಿದೆ. ಈಗಾಗಲೇ ಫಿನಾಲೆ ದಿನದ ಶನಿವಾರ ತುಕಾಲ್ ಸಂತೋ, ವರ್ತೂರ್ ಸಂತೋಷ್ ಹಾಗೂ ವಿನಯ್ ಗೌಡ ಹೊರ ಹೋಗಿದ್ದಾರೆ.
ಇನ್ನ ಫೈನಲ್ ನಲ್ಲಿ ಡ್ರೋಣ್ ಪ್ರತಾಪ್ ಗೆಲ್ಲುವ ಸಾಧ್ಯತೆ ಹೆಚ್ಚಾಗಿದ್ಸು ಅವರೇ ಗೆಲುವು ಸಾಧಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಪ್ರತಾಪ್ ಹಾಗೂ ಸಂಗಿತಾ ಮತ್ತು ಕಾರ್ತಿಕ್ ಗೌಡ ನಡುವೆ ನಡೆದ ಹಣಾಹಣಿಯಲ್ಲಿ ಕೊನೆಗೂ ಡ್ರೋಣ್ ಪ್ರತಾಪ್ ಗೆ ವಿಜಯಲಕ್ಷ್ಮಿ ಒಲಿದಿದ್ದಾಳೆ ಎಂಬ ಸುದ್ದಿ.
ಇನ್ನೂ ಹಳ್ಳಿಕಾರ್ ತಳಿಯ ಜಾನುವಾರು ಸಾಕಾಣಿಕೆಯಿಂದ ಜನಪ್ರಿಯತೆ ಪಡೆದಿರುವ ವರ್ತೂರು ಸಂತೋಷ್, ಬಿಗ್‌ಬಾಸ್‌ಗೆ ಎಂಟ್ರಿಕೊಟ್ಟ ಆರಂಭದಲ್ಲಿ ಸಿಕ್ಕಾಪಟ್ಟೆ ಡಲ್ ಆಗಿದ್ದರು. ನಂತರ ಹುಲಿ ಉಗುರು ಪ್ರಕರಣದಲ್ಲಿ ಅರೆಸ್ಟ್ ಆದರು. ನಂತರ ದೊಡ್ಮನೆಯೊಳಗೆ ಕಾಲಿಟ್ಟ ಅವರು ಸಿಕ್ಕಾಪಟ್ಟೆ ಕುಗ್ಗಿದ್ದರು.
ಜೊತೆಗೆ ಮನೆಯಿಂದ ಹೊರಹೋಗುವ ನಿರ್ಧಾರ ಕೂಡ ಮಾಡಿದ್ದರು. ಈ ಸಂದರ್ಭ ಅವರ ತಾಯಿ ಬಿಗ್‌ಬಾಸ್ ಮನೆಗೆ ಬಂದು ಅವರಿಗೆ ಧೈರ್ಯ ತುಂಬಿದ್ದರು. ನಂತರದಲ್ಲಿ ವರ್ತೂರು ಸಂತೋಷ್ ಆಕ್ಟಿವ್ ಆದರು. ಹೀಗಿದ್ದರೂ ಅವರು ಟಾಸ್ಕ್ ವಿಚಾರ ಬಂದಾಗ ಹಿಂದೇಟು ಹಾಕುತ್ತರೆಂಬುದು ಹಲವರ ಅಭಿಪ್ರಾಯ.
ಬಿಗ್‌ಬಾಸ್ ಆರಂಭದಿಂದಲೂ ವಿನಯ್ ಗೌಡ ಪ್ರಬಲ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದರು. ಶುರುವಿನಿಂದಲೂ ಸಾಕಷ್ಟು ಅಗ್ರೆಸ್ಸಿವ್ ಆಗಿದ್ದ ವಿನಯ್, ಎಲ್ಲಾ ಟಾಸ್ಕ್‌ಗಳಲ್ಲೂ ಬಹಳ ಉತ್ತಮವಾಗಿ ಆಟ ಆಡಿಕೊಂಡು ಬಂದಿದ್ದರು. ಈ ಕಾರಣಕ್ಕೆ ಅನೇಕರಿಗೆ ಅವರು ಇಷ್ಟವಾಗಿದ್ದರು. ಅನೇಕರು ಈ ಬಾರಿ ಬಿಗ್‌ಬಾಸ್ ಟ್ರೋಫಿ ಗೆಲ್ಲಲಿದ್ದಾರೆ ಎಂದು ಭಾವಿಸಿದ್ದರು. ಫೈನಲಿಸ್ಟ್ ಆಗಿದ್ದ ವಿನಯ್, ತುಕಾಲಿ ಸಂತೋಷ್ ನಂತರದಲ್ಲಿ ಎಲಿಮಿನೇಟ್ ಆಗಿದ್ದಾರೆ.
ಬಿಗ್‌ಬಾಸ್ ಸೀಸನ್ 1ರಿಂದಲೂ ವಿಜೇತರಾದವರಿಗೆ 50 ಲಕ್ಷ ರೂಪಾಯಿ ಬಹುಮಾನ ಸಿಗುವುದು ವಾಡಿಕೆ. ಅದರಂತೆ ಈ ಸೀಸನ್‌ನ ಆರಂಭದಲ್ಲೂ 50 ಎಂದೇ ನಿಗದಿಪಡಿಸಲಾಗಿತ್ತು. ನಂತರ ಬಿಗ್‌ಬಾಸ್ ಟ್ವಿಸ್ಟ್ ಕೊಟ್ಟಿ ಅದನ್ನು 25 ಲಕ್ಷಕ್ಕೆ ತಂದರು.
ಬಳಿಕ ಹಲವು ಟಾಸ್ಕ್‌ಗಳನ್ನು ನೀಡಿ ಈ ಹಣವನ್ನು ವಾಪಾಸ್ ಪಡೆದುಕೊಳ್ಳೋಕೆ ಅವಕಾಶ ನೀಡಲಾಯಿತು. ಎಲ್ಲರೂ ಟಾಸ್ಕ್ ಚೆನ್ನಾಗಿ ಆಡಿ ಆ ಹಣ ವಾಪಾಸ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಹೀಗಾಗಿ, ಈ ಬಾರಿಯೂ ಟ್ರೋಫಿ ಗೆದ್ದವರಿಗೆ 50 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುತ್ತದೆ.