
ಮೂಡಲಗಿ : ಭೀಕರ ರಸ್ತೆ ಅಪಘಾತ ; ಓರ್ವ ಸಾವು

ಮೂಡಲಗಿ : ದ್ವಿಚಕ್ರ ಹಾಗೂ ಟ್ರಾಕ್ಟರ್ ನಡುವೆ ರಸ್ತೆ ಅಪಘಾತದಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ರವಿವಾರದಂದು ಸಾಯಂಕಾಲ ಪಟ್ಟಣದ ಹೊರವಲಯದ ಗೋಕಾಕ ಕ್ರಾಸ್ ಬಳಿ ನಡೆದಿದೆ.
ಗೋಕಾಕ ತಾಲೂಕಿನ ಬಾಳೋಬಾಳ ಗ್ರಾಮದ ಶಿವಾನಂದ ಲಗಮಣ್ಣ ಕಳಸನ್ನವರ (27) ಮೃತಪಟ್ಟ ವ್ಯಕ್ತಿ ಹಾಗೂ ಆತನ ಸ್ನೇಹಿತ ಬಾಬುರಾವ ದಾನಗೋಳ ಎಂಬಾತ ಸ್ವ-ಗ್ರಾಮದಿಂದ ಮೂಡಲಗಿ ಪಟ್ಟಣಕ್ಕೆ ತೆರಳುವ ವೇಳೆ ಘಟನೆ ಜರುಗಿದೆ.
ದ್ವಿಚಕ್ರ ಹಿಂಬದಿ ಸವಾರ ಬಾಬುರಾವಗೆ ಗಂಭೀರ ಗಾಯವಾಗಿದ್ದು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಘಟನಾಸ್ಥಳಕ್ಕೆ ಸ್ಥಳೀಯ ಪೊಲೀಸ್ ಠಾಣೆಯವರು ಭೇಟಿ ಪರಿಶೀಲನೆ ನಡೆಸಿದ್ದಾರೆ.