ಬಿಗ್ ಬಾಸ್ – 11 ರಲ್ಲಿ ಕೇಳಿಬಂದ್ವು ಅಚ್ಚರಿ ಹೆಸರುಗಳು
ಬಿಗ್ ಬಾಸ್ – ಕನ್ನಡ 10 ರ ಸೀಸನ್ ಯಶಸ್ವಿ ಪ್ರದರ್ಶನದ ನಂತರ ಈಗ 11 ನೇ ಸೀಜನ್ ಗೆ ಅಚ್ಚರಿ ಹೆಸರುಗಳು ಕೇಳಿಬರುತ್ತಿವೆ. ಈ ಮಧ್ಯೆ ಸೋಶಿಯಲ್ ಮೀಡಿಯಾ ಸ್ಟಾರ್ ಗಳ ಪಟ್ಟಿ ತುಂಬಾ ದೊಡ್ಡದಾಗಿ ಬೆಳೆಯುತ್ತಿದೆ.
ಈ ಬಾರಿಯ ಬಿಗ್ ಬಾಸ್ ನಲ್ಲಿ ಉತ್ತರ ಕರ್ನಾಟಕದ ಪ್ರತಿಭೆಗಳ ಹೆಸರೂ ಜೋರಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಹೆಸರು ಮಾಡಿರುವ ಪ್ರೀಯಾ ಸವದಿ, ಮುಕಳೆಪ್ಪ ಹಾಗೂ ಶಿವಪತ್ರ ಯಾದವಾಡ ಅವರ ಹೆಸರು ಜೋರಾಗಿ ಕೇಳಿಬರುತ್ತಿದ್ದು ಇವರ ಅಭಿಮಾನಿಗಳು ಜೈ ಅಂದಿದ್ದಾರೆ.
ಇನ್ನೂ ಇದೇ ಸೀಜನ್ ನಲ್ಲಿ ಕೆಲವು ಅಚ್ಚರಿ ಹೆಸರುಗಳಿವೆ. ಚಿಕ್ಕಮಗಳೂರಿನ ಗೌದಿಗದ್ದೆಯ ವಿನಯ್ ಗುರುಜಿ ಹಾಗೂ ಮಾಜಿ ಕೊಡಗು – ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಹೆಸರು ಜೋರಾಗಿ ಕೇಳಿಬರುತ್ತಿವೆ.
ಮಾಜಿ ಸಂಸದ ಪ್ರತಾಪ್ ಸಿಂಹ ಅವರಿಗೆ ಮೈಸೂರು ಲೋಕಸಭಾ ಟಿಕೆಟ್ ಮಿಸ್ ಮಾಡಿದ್ದ ಹಿನ್ನಲೆಯಲ್ಲಿ ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರತಾಪ್ ಸಿಂಹ ಸುದ್ದಿ ಸಂಕಲನ ಮೂಡಿಸಿತ್ತು. ಜೊತಗೆ ಯುವ ರಾಜಕಾರಣಿ ಪ್ರತಾಪ್ ಸಿಂಹ ಆಗಾಗ್ಗೆ ತಮ್ಮ ವಿವಾದಾತ್ಮಕ ಹೇಳಿಕೆಯಿಂದಲೇ ಸುದ್ದಿಯಾಗುತ್ತಾರೆ. ಸಧ್ಯ ಇವರ ಹೆಸರು ಬಿಗ್ ಬಾಸ್ ನಲ್ಲಿ ಕೇಳಿಬರುತ್ತಿದೆ.
ಇನ್ನೂ ವಿನಯ್ ಗುರುಜಿ ಈ ಬಾರಿ ಬಿಗ್ ಬಾಸ್ ಗೆ ಹೋಗುತ್ತಾರೆ ಎಂಬ ಮಾತು ಜೋರಾಗಿವೆ. ಸಧ್ಯ ಸೋಶಿಯಲ್ ಮೀಡಿಯಾದಲ್ಲಿ ಅನೇಕರ ಹೆಸರು ಜೋರಾಗಿ ಕೇಳಿಬರುತ್ತಿವೆ. ಇದರಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಮಾಡಿಕೊಂಡು ಫೇಮಸ್ ಆದವರ ಹೆಸರೂ ಇವೆ.
ಸೀರಿಯಲ್ ನಟಿ ಜ್ಯೋತಿ ರೈ. ಹಾಗೆಯೇ ಪ್ರವಾಸಿ ಕುರಿತು ವೀಡಿಯೋ ಮಾಡುವ ಯೂಟ್ಯೂಬರ್ ಡಾ. ಬ್ರೋ. ನಟಿ ಹರ್ಷ ಕಾವೇರಿ, ನಟಿ ಪ್ರೀಯಾ ಶಠಮರ್ಷನ್, ಮಾಜಿ ಸಚಿವ ಸಿ.ಪಿ ಯೋಗೇಶ್ವರ ಪುತ್ರಿ ನಿಶಾ ಯೋಗೇಶ್ವರ್, ಅಶ್ವಿನಿ ಗೌಡ ಹೆಸರು ಕೇಳಿಬರುತ್ತಿವೆ.
ಇನ್ನೂ ಟಿಕ್ ಟಾಕ್ ಸ್ಟಾರ್ ಪ್ರೀಯಾ ಸವದಿ, ಮುಕಳೆಪ್ಪ, ಶಿವಪುತ್ರ ಯಾದವಾಡ, ವಕೀಲ ನಾಗರಾಜ ಕುಡಪಲಿ ಸೇರಿದಂತೆ ಅನೇಕರ ಹೆಸರುಗಳು ಕೇಳಿಬರುತ್ತಿವೆ. ಇನ್ನೂ ಇದೇ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ನಡೆದಿದ್ದು ಪರ, ವಿರೋಧ ಚರ್ಚೆ ನಡೆದಿವೆ.