Video – ಏಳು ವರ್ಷದ ಹಿಂದೆ ರಿಷಭ್ ಶೆಟ್ಟಿ ಅನುಭವಿಸಿದ ಕಷ್ಟ ಎಂತಹದು ಗೊತ್ತಾ….?
ಸ್ನೇಹಿತರೇ, ಟೈಮ್ ಅನ್ನೋದು ಯಾವಾಗ ಹೇಗ್ಬೇಕಾದ್ರೂ ಚೇಂಜ್ ಆಗುತ್ತೆ. ಕೆಲವೊಂದ್ಸಲ ಲಕ್ ಅನ್ನೋ ಲಿಫ್ಟ್ ಎದುರುಗಡೆ ಬಂದ್ರೆ, ಇನ್ನೂ ಕೆಲವೊಮ್ಮೆ ಪರಿಶ್ರಮ ಅನ್ನೋ ಮೆಟ್ಟಿಲು ಕೈಹಿಡಿದು ನಡೆಸುತ್ತೆ.
ಹೀಗೆ ಇವತ್ತು ಪರಿಶ್ರಮದಿಂದಲೇ ಇಡೀ ಕರ್ನಾಟಕದಾದ್ಯಂತ ಸದ್ದು ಮಾಡ್ತಿರೋರು ಕರಾವಳಿಯ ರಿಷಭ್ ಶೆಟ್ಟಿ.
ಅದು 2016ನೇ ಇಸ್ವಿ…ಕರಾವಳಿ ಹುಡುಗನೊಬ್ಬ ನಿರ್ದೇಶನ ಮಾಡಿದ್ದ ರಿಕ್ಕಿ ಸಿನಿಮಾ ರಿಲೀಸ್ ಆಗಿತ್ತು. ರಿಕ್ಕಿ ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಕೂಡ ಸಿಕ್ಕಿದ್ರೂ ಸಹ,
ಮಂಗಳೂರಿನ ಚಿತ್ರಮಂದಿರಗಳಲ್ಲಿ ರಿಕ್ಕಿ ಸಿನಿಮಾ ಪ್ರದರ್ಶನಕ್ಕೆ ಹಿಂದೇಟು ಹಾಕಿದ್ದರು.
ಅಯ್ಯೋ ಕಾಂತಾರ ಕಲರವ ಸ್ಟಾರ್ಟ್ ಆಗಿರೋ ಈ ಟೈಮ್‌ಲ್ಲಿ ಯಾಕೆ ರಿಕ್ಕಿ ವಿಚಾರ ಹೇಳ್ತಿದ್ದೀನಿ ಅಂತೀರಾ? ಅದಕ್ಕೂ ಒಂದ್ ರೀಸನ್ ಇದೆ. ಆವತ್ತು ರಿಕ್ಕಿ ರಿಲೀಸ್ ವೇಳೆ ರಿಷಬ್ ಶೆಟ್ಟಿ ಮಾಡಿದ್ದ ಟ್ವೀಟ್ವೊಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಅಂತೂ ಇಂತೂ ಅವರಿವರ ಕೈ ಕಾಲು ಹಿಡಿದು ಮಂಗಳೂರಿನ ಬಿಗ್ ಸಿನಿಮಾಸ್‌ನಲ್ಲಿ ಸಂಜೆ 7 ಗಂಟೆ ಶೋ ಸಿಕ್ತು. ನೋಡಲು ಇಚ್ಛಿಸುವವರು ನಾಳೆಗೆ ಟಿಕೆಟ್ ಬುಕ್ ಮಾಡಿ ಅಂತಾ ರಿಷಬ್ ಶೆಟ್ಟಿ ‘ರಿಕ್ಕಿ’ ಸಿನಿಮಾ ಕುರಿತು ಪೋಸ್ಟ್ ಮಾಡಿದ್ದರು.
ಆದ್ರೆ ಇವತ್ತು ಕಾಲ ಬದಲಾಗಿದೆ.
ಅಂದು ರಿಷಭ್ ಶೆಟ್ಟಿ ಪರದಾಡಿದ್ದ ಮಂಗಳೂರಿನ ಆ ಸ್ಥಳದಲ್ಲಿ, ಇಂದು ಎಲ್ಲಿ ನೋಡಿದ್ರೂ ಅವರದ್ದೇ ಹವಾ, ಕಾಂತಾರದ್ದೇ ಘರ್ಜನೆ..
ಒಂದು ಶೋಗಾಗಿ ಪರದಾಡಿದ್ದ ಅದೇ ಚಿತ್ರಮಂದಿರದಲ್ಲಿ ಇಂದು 6 ಕ್ಕೂ ಹೆಚ್ಚು ಶೋಗಳು ಪ್ರದರ್ಶನಗೊಳ್ಳುತ್ತಿದೆ. ಇದೇ ಅಲ್ವಾ ನಿಜವಾದ ಯಶಸ್ಸು ಅಂದರೆ ಅಂತಾ ಫ್ಯಾನ್ಸ್ ಮಾತನಾಡಿಕೊಳ್ಳುತ್ತಿದ್ದಾರೆ. ಇಂದು ಅದೇ ಮಲ್ಟಿಫ್ಲೆಕ್ಸ್‌ನಲ್ಲಿ ಶೋ ಗಳ ಸಂಖ್ಯೆ ಹೆಚ್ಚು ಮಾಡಿದ್ರೂ ಸಹ ಜನರಿಗೆ ಟಿಕೆಟ್ ಸಿಗ್ತಾ ಇಲ್ಲ!
ಇದಕ್ಕೇ ಅಲ್ವಾ ಕಾಲಾಯ ತಸ್ಮೈ ನಮಃ ಅನ್ನೋದು…
ಇದಿಷ್ಟೇ ಅಲ್ಲ..ರಿಷಭ್ ಶೆಟ್ಟಿ ಇವತ್ತು ಈ ಮಟ್ಟಕ್ಕೆ ಸುಲಭವಾಗಿ ಬಂದು ನಿಂತಿಲ್ಲ. ಸಾಕಷ್ಟು ಬೆವರು ಹರಿಸಿದ್ದಾರೆ. ಡ್ರೈವರ್ ಆಗಿ ಕೆಲಸ ಮಾಡಿದ್ದಾರೆ, ಟೀ ಪುಡಿ ಮಾರಿದ್ದಾರೆ. ಮಿನರಲ್ ವಾಟರ್, ಸೋಲಾರ್ ಸಹ ಮಾರೋ ಕೆಲಸ ಮಾಡ್ತಿದ್ರು. ಹೋಟೆಲ್‌ಲ್ಲಿಯೂ ಕೆಲಸ ಮಾಡಿದ್ರು. ಆದ್ರೀಗ ತಮ್ಮ ಸತತ ಹೋರಾಟ, ನ್ಯಾಯಯುತ ಪರಿಶ್ರಮದಿಂದ, ಇಂದು ಈ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ.
ಇದೇ ಅಲ್ವಾ ನಿಜವಾದ ಸಾಧನೆ ಅಂದ್ರೆ…