ಭಾರತ ಜೋಡೋ ಯಾತ್ರೆಯಲ್ಲಿ ಬೆಳಗಾವಿ ನಾಯಕಿಯರ ಅಪರೂಪದ ಚಿತ್ರಗಳು
ಬೆಳಗಾವಿ : ಕಾಂಗ್ರೆಸ್ ಪಕ್ಷದ ಯಶಸ್ವಿ ಯಾತ್ರೆ ಭಾರತ್ ಜೋಡೋ ಅಭೂತಪೂರ್ವ ಯಶಸ್ಸು ಕಾಣುತ್ತಿದ್ದು ಸಧ್ಯ ಕುಂದಾನಗರಿ ಕಾಂಗ್ರೆಸ್ ನಾಯಕಿಯರು ಕೇಂದ್ರಬಿಂದುವಾಗಿದ್ದು ವಿಶೇಷ.
ಕಾಂಗ್ರೆಸ್ ಹಿರಿಯ ನಾಯಕ ಸೋನಿಯಾ ಗಾಂಧಿ ಹಾಗೂ ಮುವ ನಾಯಕ ಹಾಗೂ ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂದಿ ಜೊತೆಗೂಡಿ ಬೆಳಗಾವಿಯ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಅವರ ಪೋಟೋ ಎಲ್ಲರ ಗಮನ ಸೆಳೆಯುತ್ತಿವೆ.
ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಭಾರತ ಜೋಡೋ ಪಾದಯಾತ್ರೆ ಕರ್ನಾಟಕದಲ್ಲಿ ಗುರುವಾರ 7ದಿನಕ್ಕೆ ತಲುಪಿದ್ದು ಆಯುಧ ಪೂಜೆ ಹಾಗೂ ವಿಜಯದಶಮಿ ಪ್ರಯುಕ್ತ ಎರಡು ದಿನಗಳ ಬಿಡುವನ್ನು ನೀಡಲಾಗಿತ್ತು.
ಆಕ್ಟೋಬರ್ 3ರಂದು ರಾಜ್ಯಕ್ಕೆ ಆಗಮಿಸಿದ ಸೋನಿಯಾ ಹೆಚ್.ಡಿ.ಕೋಟೆ ಬಳಿಯಿರುವ ಆರೆಂಜ್ ಕೌಂಟಿ ರೆಸಾರ್ಟ್ನಲ್ಲಿ ತಂಗಿದ್ದರು.