
ಮಾಧ್ಯಮಗಳು ಹುದ್ದೆ ಕೊಡುವುದಿಲ್ಲ ; ಸಾಹುಕಾರ್ ವಿರುದ್ಧ ಡಿಕೆಶಿ ಗರಂ

ಬೆಳಗಾವಿ : ಕೆಪಿಸಿಸಿ ಅಧ್ಯಕ್ಷ ಹುದ್ದೆ ಬದಲಾವಣೆ ವಿಚಾರವಾಗಿ ಬುಧವಾರ ಸಚಿವ ಸತೀಶ್ ಜಾರಕಿಹೊಳಿ ಸುದ್ದಿಗೋಷ್ಠಿ ಬೆನ್ನಲ್ಲೇ ಇಂದು ಡಿಸಿಎಂ ಡಿ.ಕೆ ಶಿವಕುಮಾರ್ ಸಿಡಿಮಿಡಿ ಗೊಂಡಿದ್ದಾರೆ.
ಮಾಧ್ಯಮಗಳ ಮುಂದೆ ಹೇಳಿದರೆ ಸ್ಥಾನ ಸಿಗುತ್ತಾ..? ಯಾವುದಾದರು ಹುದ್ದೆ ಬೇಕಾದರೆ ಹೈಕಮಾಂಡ್ ನಾಯಕರನ್ನು ಕೇಳಬೇಕು. ಅದು ಬಿಟ್ಟು ಮಾಧ್ಯಮಗಳ ಮುಂದೆ ಹೇಳಿದರೆ ಏನು ಸುಗುತ್ತದೆ ಎಂದರು.
ನಾವು ಮಾಡಿರುವ ಕೆಲಸ ಮೇಲೆ ಪಕ್ಷದ ಹೈಕಮಾಂಡ್ ಗುರುತಿಸಿ ಸ್ಥಾನಮಾನ ನೀಡುತ್ತದೆ. ನಾನು ಇದನ್ನು ಹೊಸದಾಗಿ ನೋಡುತ್ತಿದ್ದೇನೆ. ಮಾಧ್ಯಮಗಳ ಮುಂದೆ ಹೇಳಿದರೆ ಸ್ಥಾನ ಸಿಗುತ್ತಾ ಎಂದು ಗರಂ ಆಗಿದ್ದಾರೆ.