ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ; ಅವಕಾಶ ಕೊಟ್ಟರೆ ಸ್ಫರ್ಧೆ ಖಚಿತ – ಲಕ್ಷ್ಮಣ ಸವದಿ
ಅಥಣಿ : ನನ್ನ ಸ್ವಾಭಿಮಾನಕ್ಕೆ ಧಕ್ಕೆ ಉಂಟಾಗಿದೆ. ನಾನು ಮನೆಯಲ್ಲಿ ಸುಮ್ಮನ್ನಿದ್ದೆ ಆದರೆ ಕೆಲವರು ಸುಮ್ಮನಿರಲು ಬಿಡಲಿಲ್ಲ. ನನ್ನ ಸ್ವಾಭಿಮಾನಕ್ಕೆ ಧಕ್ಕೆ ಆದ ಕಾರಣ ನಾನು ಮುಖಂಡರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದೇನೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.
ಶುಕ್ರವಾರ ಅಥಣಿ ಪಟ್ಟಣದಲ್ಲಿ ನಡೆದ ಮುಸ್ಲಿಂ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿದ ಇವರು. ನನಗೆ ಪಕ್ಷ ಎಲ್ಲವನ್ನೂ ಕೊಟ್ಟಿದೆ. ಪರಿಷತ್ ಸದಸ್ಯನಾಗಿ ಅಧಿಕಾರ ಅನುಭವಿಸಬಹುದಿತ್ತು. ಆದರೆ ಕೆಲವರು ನನ್ನ ಸ್ವಾಭಿಮಾನಕ್ಕೆ ಧಕ್ಕೆ ತಂದಿದ್ದಾರೆ. ಇದರಿಂದ ನಾನು ತಮ್ಮ ಬಳಿ ಬಂದಿರುವೆ. ತಾವೆಲ್ಲರೂ ಸೇರಿ ಚುನಾವಣೆ ಸ್ಪರ್ಧಿಸಲು ಒಪ್ಪಿಗೆ ಕೊಡ್ಟರೆ ನಿರ್ಧಾರ ಪ್ರಕಡಿಸುವೆ ಎಂದು ಪರೋಕ್ಷವಾಗಿ ಚುನಾವಣೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.