ಸರ್ಕಾರದ ಅನುದಾನ ಗುಳುಂ ಮಾಡಿದ ಗಿರಾಕಿ ಅವನು : ಚನ್ನರಾಜ ಹಟ್ಟಿಹೊಳಿ ವಿರುದ್ಧ ಲಖನ್ ವ್ಯಂಗ್ಯ
ಬೆಳಗಾವಿ : ವೇದಿಕೆ ಮೇಲೆ ಯಾವೆಲ್ಲ ರೀತಿಯಲ್ಲಿ ಮಾತನಾಡಬೇಕು ಎಂಬ ಪರಿಜ್ಞಾನ ಇಲ್ಲದೆ ಮಾತನಾಡುವ ವ್ಯಕ್ತಿ ಹೆಬ್ಬಾಳ್ಕರ್ ಸಹೋದರ. ಸರ್ಕಾರದ ಅನುದಾನವನ್ನು ಸಹೋದರಿ ಕ್ಷೇತ್ರಕ್ಕೆ ಖರ್ಚು ಮಾಡಿ ಗುಳುಂ ಮಾಡಿದ ವ್ಯಕ್ತಿ ಎಂದು ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಹೇಳಿದರು.
ಗೋಕಾಕ್ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇವರು. ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದದಲ್ಲಿ ಜಾರಕಿಹೊಳಿ ಅವರ ಆಟ ನಡೆಯಲ್ಲ ಎಂಬ ಚನ್ನರಾಜ ಹಟ್ಟಿಹೊಳಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಇವರು. ಶಾಸಕಿ ಹೆಬ್ಬಾಳ್ಕರ್ ತಮ್ಮ ಸಹೋದರನಿಗೆ ಸಂಸ್ಕೃತಿ ಕಲಿಸಬೇಕು. ಸಹೋದರಿ ಅಭಿವೃದ್ಧಿಯನ್ನು ತನ್ನ ಅಭಿಯ ಎಂದು ತೋರಿಸುತ್ತಿದ್ದಾನೆ. ಕಾಂಗ್ರೆಸ್ ಮುಖಂಡರಿಗೆ ಇರುಸು ಮುರುಸು ಉಂಟುಮಾಡಿದ್ದ ವ್ಯಕ್ತಿ ಕುರಿತು ನಾನು ಮಾತನಾಡುವುದಿಲ್ಲ. ಆತ ಒಬ್ಬ ಕಳ್ಳ ಎಂದು ವಾಗ್ದಾಳಿ ನಡೆಸಿದರು.
ಗೋಕಾಕ್ ಕ್ಷೇತ್ರದಲ್ಲಿ ನಾವು ಎಷ್ಟು ಅಭಿವೃದ್ಧಿ ಮಾಡಿದ್ದೇವೆ ಎಂಬುದನ್ನು ಹೇಳುತ್ತೇನೆ. ನನ್ನ ಪರಿಷತ್ ಅವಧಿಯಲ್ಲಿ ಕಳೆದ ಒಂದು ವರ್ಷದಲ್ಲಿ ಬಂದ ಮೂರು ಕೋಟಿ ಅನುದಾನವನ್ನು ಎಲ್ಲಿ ಖರ್ಚು ಮಾಡಿದ್ದನ್ನು ಹೇಳುತ್ತೇನೆ. ಆದರೆ ಶಾಸಕಿ ಸಹೋದರ ಸರ್ಕಾರದ ಹಣವನ್ನು ಗುಳುಂ ಮಾಡಿ ಪ್ರಚಾರ ಪಡೆಯುತ್ತಿದ್ದಾನೆ ಎಂದು ಆರೋಪಿಸಿದರು.