Select Page

ಅಪ್ಪುಮಯವಾದ ಕುಂದಾನಗರಿ ಕನ್ನಡ ರಾಜ್ಯೋತ್ಸವ

ಅಪ್ಪುಮಯವಾದ ಕುಂದಾನಗರಿ ಕನ್ನಡ ರಾಜ್ಯೋತ್ಸವ

ಸಡಗರದಿಂದ ಕುಣಿದು ಕುಪ್ಪಳಿಸಿದ ಯುವಕರು

ಹುಕ್ಕೇರಿ ಹಿರೇಮಠದಿಂದ ಕನ್ನಡಿಗರಿಗೆ ಹೋಳಿಗೆ ಊಟ

ಬೆಳಗಾವಿ : ಕಳೆದ ಎರಡು ವರ್ಷಗಳಿಂದ ಕನ್ನಡ ರಾಜ್ಯೋತ್ಸವ ಆಚರಣೆ ಇಲ್ಲದೆ ಮಂಕಾಗಿದ್ದ ಕುಂದಾನಗರಿಯಲ್ಲಿ ಈ ಬಾರಿ ಅದ್ಧೂರಿ ಕನ್ನಡ ರಾಜ್ಯೋತ್ಸವ ಆಚರಣೆ ನಡೆಯಿತು.‌ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಕನ್ನಡಿಗರು ಸಂಭ್ರಮದಿಂದ ಕುಣಿದು ಕುಪ್ಪಳಿಸಿ ಕನ್ನಡ ಹಬ್ಬ ಆಚರಿಸಿದರು.

ವಾಡಿಕೆಯಂತೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 67 ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿದರು. ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ರೂಪಕಗ ಪ್ರದರ್ಶ‌ನಕ್ಕೆ ಸಚಿವರು ಚಾಲನೆ ನೀಡಿ ರಾಣಿ ಚನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಿದರು.‌

ಹುಕ್ಕೇರಿ ಹಿರೇಮಠದಿಂದ ಲಕ್ಷ ಹೋಳಿಗೆ : ಈ ಬಾರಿ ಕನ್ನಡ ರಾಜ್ಯೋತ್ಸವಕ್ಕೆ ಆಗಮಿಸಿದ್ದ ಪ್ರತಿಯೊಬ್ಬರಿಗೂ ಹುಕ್ಕೇರಿ ಹಿರೇಮಠದಿಂದ ಹೋಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಕನ್ನಡದ ಖ್ಯಾತ ನಟ ಸಾಯಿಕುಮಾರ ಭಾಗವಹಿಸಿ ಹುಕ್ಕೇರಿ ಹಿರೇಮಠದ ದಾಸೋಹವನ್ನು ಕೊಂಡಾಡಿದರು. ಈ ಸಂದರ್ಭದಲ್ಲಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸರತಿ ಸಾಲಿನಲ್ಲಿ ನಿಂತು ಸಾವಿರಾರು ಕನ್ನಡ ಅಭಿಮಾನಿಗಳು ಹೋಳಿಗೆ ರುಚಿ ಸವಿದಿದ್ದು ಈ ಬಾರಿಯ ವಿಶೇಷ.

ಎಂಇಎಸ್ ಪುಂಡರಿಂದ ಕರಾಳ ದಿನ ಆಚರಣೆ : ಈ ಬಾರಿಯೂ ಎಂಇಎಸ್ ಪುಂಡರಿಂದ ನಾಡದ್ರೋಹಿ ಹೇಳಿಕೆ ಕೇಳಿಬಂತು.‌ ರಾಜ್ಯೋತ್ಸವ ಆಚರಣೆ ಹಾಗೂ ಬೆಳಗಾವಿ ಮಹಾರಾಷ್ಟ್ರಕ್ಕೇ ಸೇರಿಸಬೇಕೆಂದು ನೂರಾರು ಎಂಇಎಸ್ ಕಾರ್ಯಕರ್ತರು ಕರಾಳ ದಿನ ಆಚರಣೆ ಮಾಡಿದರು. ಈ ಸಂದರ್ಭದಲ್ಲಿ ಎಂಇಎಸ್ ಮುಖಂಡರಾದ ದೀಪಕ್ ದಳವಿ, ಶುಭಂ ಶಳಕೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *

error: Content is protected !!