ಕರ್ನಾಟಕದ ವೈಭವ – ಜಯಶ್ರೀ ಅವಟಿ
ಭೂಮಿಯ ಮೇಲೊಂದು ಸ್ವರ್ಗದಂತ ಪ್ರಕೃತಿ..
ಅದು ಬಲು ಸುಂದರ ಗೋಡಂಬಿಯಂತ ಆಕೃತಿ..
ಇದರ ಭಾಷೆ ಕನ್ನಡ…ಅದರ ಮೂಲ ದ್ರಾವಿಡ
ವ್ಹಾ..ವ್ಹಾ..ಚಿನ್ನದ ಬೀಡು ಈ ಚೆಂದದ ನಾಡು
ಬಯಲು ಸೀಮೆಯೂ..ಮಲೆನಾಡ ಸುಂದರಿಯೂ…
ಭೋರ್ಗರೆಯುತ್ತ ಧುಮುಕುವ ಜಲಪಾತಗಳ ಸೌಂದರ್ಯ ಸಿರಿಯೂ…
ವನಸಿರಿಯಿಂದ ಹೆಣೆದಂತಿದೆ ಹಚ್ಚಹಸಿರು ಚಪ್ಪರ
ಕೇಳುತಿಲ್ಲವೇ ನಿಮಗೆ ಸರಿಗಮಪಗಳ ಝೇಂಕಾರ?
ಸೀಮೆ ದಾಟಿ ಹರಡಿದೆ ಶ್ರೀಗಂಧದ ಪರಿಮಳ..
ಈ ನಿಸರ್ಗ ಪ್ರೇಮಕೆ ಮಿಡಿಯುತ್ತಿದೆ ಮನದಾಳ..
ಶಿಲ್ಪಕಲೆಗಳಲ್ಲಡಗಿದ ನರ್ತನ
ತಲ್ಲಣಗೊಳಿಸಿತು ಆ ಸಂಜೆಯ ದರ್ಶನ
ವಿಶ್ವಕ್ಕೆ ಕೈ ಬೀಸಿ ಕರೆಯುತ್ತಿದೆ ಈ ಅಮೋಘ ಸೌಂದರ್ಯ..
ಏಳು ಸುತ್ತಿನ ಕೋಟೆಯೊಳಡಗಿದೆ ಅದೆಷ್ಟೋ ಐಶ್ವರ್ಯ..
ಇದು ಹಲವು ಧರ್ಮಗಳೆಲ್ಲ ವಿರಮಿಸುವ ತೋಟ
ವಿಶ್ವಕ್ಕೆ ಕಲಿಸುತ್ತಿದೆ ಶಾಂತಿ ಸಹನೆಯ ಪಾಠ
ನಿನ್ನ ಹಸಿರಲಿ ನಮ್ಮೆಲ್ಲರ ಉಸಿರಡಗಿದೆ..
ನಿನ್ನ ಚರಣದ ಕಾಂತಿಯಲ್ಲಿ ನಮ್ಮ ಮನದ ಶಾಂತಿಯಡಗಿದೆ..
ಓ ಕನ್ನಡಾಂಬೆಯೇ..ಭಾರತ ಮಾತೆಯ ಸುಪುತ್ರಿಯೇ
ನಿನ್ನ ವೈಭವಕ್ಕೆ ನಾನೆಂದೋ ಮನಸೋತಿರುವೆ..!!
-ಜಯಶ್ರೀ ಅವಟಿ(ಶ್ರೀ)
ಕೊಡಗಾನೂರ,ಬೆಳಗಾವಿ