ಶಾಸಕ ರೇಣುಕಾಚಾರ್ಯ ಸಹೋದರನ ಮಗ ಶವವಾಗಿ ಪತ್ತೆ
ಬೆಂಗಳೂರು : ಕಳೆದ ನಾಲ್ಕು ದಿನಗಳ ಹಿಂದೆ ಕಾಣೆಯಾಗಿದ್ದ ಹೊನಳ್ಳಿ ಬಿಜೆಪಿ ಶಾಸಕ ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಕರ್ ಮೃತ ದೇಹ ಪತ್ತೆಯಾಗಿದ್ದು ಸಾವಿನ ಹಿಂದೆ ಹಲವು ಅನುಮಾನಗಳು ಮೂಡಿವೆ.
ಅಕ್ಟೋಬರ್ 30 ರ ರಾತ್ರಿ ಶಿವಮೊಗ್ಗಕ್ಕೆ ತೆರಳಿದ್ದ ಚಂದ್ರಶೇಖರ್ ವಾಪಸ್ ಮನೆಗೆ ಬರದಿದ್ದಾಗ ಗಾಬರಿಗೊಂಡಿದ್ದ ರೇಣುಕಾಚಾರ್ಯ ಕುಂಟುಂಬ ಪೊಲೀಸ್ ಮೊರೆ ಹೋಗಿತ್ತು. ಪೊಲೀಸ್ ಇಲಾಖೆಯ ಸತತ ಕಾರ್ಯಾಚರಣೆ ಬಳಿಕ, ಕಡದಕಟ್ಟೆ ಬಳಿಯ ತುಂಗಾ ಕಾಲುವೆಯಲ್ಲಿ ಕಾರು ಪತ್ತೆಯಾಗಿದೆ. ಕಾಲುವೆ ತಡೆಗೊಡೆಗೆ ಕಾರು ಡಿಕ್ಕಿಯಾಗಿ ಬಿದ್ದಿದ್ದಿರಬಹುದು ಎಂದು ಶಂಕಿಸಲಾಗಿದ್ದು ಅಲ್ಲಿಯೇ ಮೃತದೇಹ ಪತ್ತೆಯಾಗಿದೆ.