ಬೆಳಗಾವಿ ಬಾರ್ ಅಸೋಸಿಯೇಶನ್ ಅಧ್ಯಕ್ಷ ಪ್ರಭು ಯತ್ನಟ್ಟಿ ವಜಾಗೆ ಕರವೇ ಆಗ್ರಹ
ಬೆಳಗಾವಿ : ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಜಿಲ್ಲಾಡಳಿತ ಕನ್ನಡಿಗರಿಗೆ ಬ್ಯಾನರ್ ಹಾಕಲು ಅವಕಾಶ ನೀಡುತ್ತಿಲ್ಲ. ಜಿಲ್ಲಾಡಳಿತ ವರ್ತನೆ ಗಮನಿಸಿದರೆ ಎಂಇಎಸ್ ಜೊತೆಗೂಡಿ ಕರಾಳ ದಿನ ಆಚರಣೆ ಮಾಡಬೇಕಾದ ಚಿಂತನೆ ಮೂಡುತ್ತದೆ ಎಂಬ ಹೇಳಿಕೆ ನೀಡಿದ್ದ ಬೆಳಗಾವಿ ಬಾರ್ ಅಸೋಸಿಯೇಶನ್ ಅಧ್ಯಕ್ಷ ಪ್ರಭು ಯತ್ನಟ್ಟಿ ಅವರನ್ನು ಹುದ್ದೆಯಿಂದ ವಜಾ ಮಾಡುವಂತೆ ಆಗ್ರಹಿಸಿ ಕರವೇ ಶಿವರಾಮೇಗೌಡ ಬಣ ಆಗ್ರಹಿಸಿದೆ.
ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಆಗಮಿಸಿದ್ದ ಕರವೇ ಕಾರ್ಯಕರ್ತರರು ವಕೀಲ ಪ್ರಭು ಯತ್ನಟ್ಟಿ ಅವರ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಈ ಸಂದರ್ಭದಲ್ಲಿ ಮಾತನಾಡಿದ
ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ಜಿಲ್ಲಾಧ್ಯಕ್ಷ ವಾಜಿದ್ ಅಹ್ಮದ್ ಹಿರೇಕೊಡಿ. ನಮ್ಮ ನೆಲದ ಕಾನೂನು ರಕ್ಷಣೆ ಮಾಡುವ ಮಹತ್ವದ ಹುದ್ದೆಯಲ್ಲಿರುವ ವಕೀಲರು ಹಾಗೂ ಬೆಳಗಾವಿ ಬಾರ್ ಅಸೋಸಿಯೇಶನ್ ಅಧ್ಯಕ್ಷ ಹುದ್ದೆಯಲ್ಲಿರುವವರು ಈ ರೀತಿಯ ಹೇಳಿಕೆ ನೀಡಿದ್ದು ಕನ್ನಡಿಗರಿಗೆ ನೋವು ತರಿಸಿದ್ದು, ಅವರನ್ನು ಕೂಡಲೇ ವಜಾ ಮಾಡುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹೋರಾಟಗಾರರಾದ, ಗೌಸ್ ಸನದಿ, ಮಾಂತೇಶ್ ರನಗಟಿಮಠ, ಬಾಳಪ್ಪಾ ಗುಡಗೇನಟ್ಟಿ, ರೋಷನ್ ಶೆಟ್ಟಿ ಸಂಗೀತ ಕಾಂಬಳೆ, ವಿವೇಕಾನಂದ ಕತ್ತಿ, ಅಶೋಕ್ ಗಾಡಿವಡ್ಡರ್, ರವಿ ಗಾಡಿವಡ್ಡರ್ ಮೇಘನಾ ಕೆಂಗೇರಿ ಪದಾಧಿಕಾರಿಗಳು ಉಪಸ್ಥಿತರಿದ್ದರು.