ನ.30ರಿಂದ ಡಿಸೆಂಬರ್ 10 ರವರೆಗೆ ಬೆಳಗಾವಿ ಕಲಾ ಉತ್ಸವ-ಸಪ್ನ ಬುಕ್ ಹೌಸ್ ನಿಂದ ಭರ್ಜರಿ ರಿಯಾಯಿತಿ
ಬೆಳಗಾವಿ : ಪ್ರತಿಷ್ಠಿತ ಪುಸ್ತಕ ಮಳಿಗೆ ಸಪ್ನ ಬುಕ್ ಹೌಸ್ ನಿಂದ ಕರ್ನಾಟಕ ರಾಜ್ಯೋತ್ಸವ ಹಿನ್ನಲೆ ಓದುಗರಿಗೆ ವಿಶೇಷ ರಿಯಾಯಿತಿ ನೀಡಲಾಗುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಪ್ನ ಬುಕ್ ಹೌಸ್ ಬೆಳಗಾವಿ ವ್ಯವಸ್ಥಾಪಕ ನಿರ್ದೇಶಕ ರಘು ಎಮ್ ವಿ. ಹೇಳಿದರು.
ಗುರುವಾರ ನಗರದ ಕೊಲ್ಲಾಪುರ ವೃತ್ತದಲ್ಲಿರುವ ಸಪ್ನ ಬುಕ್ ಹೌಸ್ ಮಳಿಗೆಯಲ್ಲಿ ನಡೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಇವರು. ಕನ್ನಡ ರಾಜ್ಯೋತ್ಸವ ಹಿನ್ನಲೆಯಲ್ಲಿ ಇಡೀ ನವೆಂಬರ್ ತಿಂಗಳವರೆಗೆ ಕನ್ನಡ ಪುಸ್ತಕಗಳಿಗೆ ಶೇ. 10 ರಿಂದ 25 ರ ತನಕ ವಿಶೇಷ ರಿಯಾಯಿತಿ ನೀಡಲಾಗುತ್ತದೆ. ಜೊತೆಗೆ ಆಯ್ದು ಕನ್ನಡ ಪುಸ್ತಕಗಳಿಗೆ ಶೇ. 50 ರಷ್ಟು ರಿಯಾಯಿತಿಯನ್ನು ನೀಡಲಾಗುತ್ತದೆ. 300 ರೂ. ಗಳ ಪುಸ್ತಕ ಖರೀದಿ ಮಾಡಿದರೆ ಒಂದು ವರ್ಷದ ವರೆಗೆ ಕನ್ನಡ ಕಾದಂಬರಿಗಳನ್ನು ಶೇ. 10 ರಷ್ಟು ರಿಯಾಯಿತಿಯಲ್ಲಿ ಕೊಂಡುಕೊಳ್ಳಲು ಸ್ಮಾರ್ಟ್ ಕಾರ್ಡ್ ಪಡೆಯಬುದಾಗಿದೆ ಎಂದರು.
ಸಪ್ನ ಬುಕ್ ಹೌಸ್ ಶಾಖೆಯ ಸಭಾಂಗಣದಲ್ಲಿ ನ.6ರಂದು ಮಧ್ಯಾಹ್ನ 3 ಗಂಟೆಗೆ ಸಾಹಿತಿಗಳಾದ ಹಂಪ ನಾಗರಾಜ್ಯ ಹಾಗೂ ಜಿ. ಮಲ್ಲೇಪುರಂ ವೆಂಕಟೇಶ ಅವರೊಂದಿಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನ.13ರಂದು ಬೆಳಗ್ಗೆ 11 ಗಂಟೆಗೆ ಎ.ಆರ್.ಮಣಿಕಾಂತ್ ಅವರ ಅಧ್ಯಕ್ಷತೆಯಲ್ಲಿ ವಿವಿಧ ಕನ್ನಡಪರ ಕಾರ್ಯಕ್ರಮಗಳು ಜರುಗಲಿವೆ ಎಂದರು.
ಈ ಸಂದರ್ಭದಲ್ಲಿ ರೋಷ್ಟ್ರಂ ಡೈರಿ ಸಂಸ್ಥೆಯ ಸಂಸ್ಥಾಪಕ ಅಭಿಷೇಕ ಬೆಂಡಿಗೇರಿ, ಸದಸ್ಯೆ ನಿಶಿಗಂಧಾ ಕಾನೂರಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ನ.30ರಿಂದ ಡಿಸೆಂಬರ್ 10 ರವರೆಗೆ ಬೆಳಗಾವಿ ಕಲಾ ಉತ್ಸವ
ನಾಡಿನ ಕಲೆ ಹಾಗೂ ಸಂಸ್ಕೃತಿಯನ್ನು ಪೋಷಿಸುವ ಹಾಗೂ ಬೆಳೆಸುವ ದೃಷ್ಟಿಯಿಂದ ಈ ಬಾರಿ ಸಪ್ನ ಬುಕ್ ಹೌಸ್ ಹಾಗೂ ರೋಷ್ಟ್ರಂ ಡೈರಿ ಸಂಸ್ಥೆಯ ಸಹಯೋಗದಲ್ಲಿ ನ.30ರಿಂದ ಡಿಸೆಂಬರ್ 10 ರವರೆಗೆ ಬೆಳಗಾವಿ ಕಲಾ ಉತ್ಸವ ಹಮ್ಮಿಕೊಳ್ಳಲಾಗಿದೆ.
ಬೆಳಗಾವಿ ಕಲಾ ಉತ್ಸವದಲ್ಲಿ ಭಾಗವಹಿಸಲು ಎರಡು ವಿಭಾಗಗಳನ್ನು ಮಾಡಲಾಗಿದ್ದು, 16 ವರ್ಷದ ಒಳಗಿನ ವಿದ್ಯಾರ್ಥಿಗಳು ಮತ್ತು 16 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಈ ಉತ್ಸವದಲ್ಲಿ ಭಾಗವಹಿಸಬೇಕು. ಈ ಉತ್ಸವವನ್ನು ಬೆಳಗಾವಿ ಕುರಿತಾದ ಚಿತ್ರಗಳನ್ನು ಮಾತ್ರ ಬಿಡಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ.
ಆಸಕ್ತರು ನ.30ರ ಒಳಗಾಗಿ ಸಪ್ನ ಬುಕ್ ಹೌಸ್‌ನಲ್ಲಿ ಉಚಿತವಾಗಿ ನೋಂದಣಿ ಮಾಡಿಕೊಳ್ಳಬೇಕು. ಅಲ್ಲದೆ, ನೋಂದಣಿದಾರರಿಗೆ ಉಚಿತವಾಗಿ ಚಿತ್ರ ಬಿಡಿಸುವ ಪೇಪರ್‌ಗಳನ್ನು ಉಚಿತವಾಗಿ ನೀಡಲಾಗುವುದು. ಅತ್ಯುತ್ತಮ ಚಿತ್ರಗಳಿಗೆ ಬಹುಮಾನ ನೀಡಲಾಗುತ್ತದೆ.
ಕನ್ನಡ ಮತ್ತು ಆಂಗ್ಲಭಾಷೆಯಲ್ಲಿ ಕಥೆಗಳ ಸ್ಪರ್ಧೆಯನ್ನು ಆಯೋಜಿಸಲಾಗಿದೆ. 1200 ಪದಗಳನ್ನು ಒಳಗೊಂಡಿರುವ ಸ್ವರಚಿತವಾಗಿರುವ ಕಥೆಗಳನ್ನು ಡಿಸೆಂಬರ್ 15ರ ಒಳಗಾಗಿ ಸಪ್ನಾ ಬುಕ್ ಹೌಸ್‌ಗೆ ಕಳುಹಿಸಬೇಕು. ಅತ್ಯುತ್ತಮ ಕಥೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು. ಅಲ್ಲದೆ, 1.70 ಲಕ್ಷ ರೂ.ವರೆಗೆ ಬಹುಮಾನ ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.