
ಬೆಳಗಾವಿ ವಾಯ್ಸ್ ಸುದ್ದಿಗೆ ಎಚ್ಚೆತ್ತುಕೊಂಡ ಚನ್ನಮ್ಮ ವಿಶ್ವವಿದ್ಯಾಲಯ : ಸುತ್ತೋಲೆ ವಾಪಸ್

ಬೆಳಗಾವಿ : ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಹಗಲು ದರೋಡೆ : ಬಡ ವಿದ್ಯಾರ್ಥಿಗಳ ಜೇಬಿಗೆ ಕತ್ತರಿ ಎಂಬ ಸುದ್ದಿ ಪ್ರಕಟಗೊಂಡ ಬೆನ್ನಲ್ಲೇ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಮಾಡಿಕೊಂಡ ಯಡವಟ್ಟು ಸರಿಪಡಿಸಿಕೊಂಡಿದೆ.
ಮೊದಲು ಹೊರಡಿಸಿದ್ದ ಸುತ್ತೋಲೆ ವಾಪಸ್ ಪಡೆದಿದ್ದು ಈ ಕೆಳಗಿನಂತೆ ಹೊಸ ಪ್ರಕಟಣೆ ಹೊರಡಿಸಿದೆ
ಎಲ್ಲ ಮಹಾವಿದ್ಯಾಲಯಗಳ ಪ್ರಾಂಶುಪಾಲರಿಗೆ ತಿಳಿಯಪಡಿಸುವುದೇನೆಂದರೆ,
ಪೂರಕ ಪರೀಕ್ಷೆಯಲ್ಲಿ ಪಾಸ್ ಆಗಿರುವ (Supplementary) ವಿದ್ಯಾರ್ಥಿಗಳಿಗೆ ದಿನಾಂಕ: 22.09.2022 ರವರೆಗೆ ದಂಡರಹಿತವಾಗಿ On-line ಮೂಲಕ ಪ್ರವೇಶಾತಿ ಪಡೆದುಕೊಳ್ಳುವುದು ಹಾಗೂ ನಿಯಮಿತ ವಿದ್ಯಾರ್ಥಿಗಳಿಗೆ (Regular Students) 1500/-ಗಳನ್ನು ದಂಡಶುಲ್ಕವನ್ನು ಪ್ರವೇಶಾತಿ ಶುಲ್ಕವನ್ನು Offline ಮೂಲಕ ದಿ: 22.09.2022 ರ ವರೆಗೆ ಪಡೆದುಕೊಳ್ಳುವುದು.
ದಿನಾಂಕ 23.09.2022 ರಿಂದ 25.09.2022 ರವರೆಗೆ 1500/- ಗಳ ದಂಡಶುಲ್ಕದೊ೦ದಿಗೆ ಎಲ್ಲ ವಿದ್ಯಾರ್ಥಿಗಳ ಪ್ರವೇಶಾತಿಯನ್ನು On-line ಮೂಲಕ ಪಡೆದುಕೊಳ್ಳುವುದು. ಪರೀಕ್ಷೆಗಳಗಿಂತಲೂ ಮುಂಚಿತವಾಗಿ ವಿಶೇಷ ತರಗತಿಗಳನ್ನು ತೆಗೆದುಕೊಂಡ ಕ್ರಮದ ಬಗ್ಗೆ ಕಡ್ಡಾಯವಾಗಿ ವಿಶ್ವವಿದ್ಯಾಲಯಕ್ಕೆ ಮಾಹಿತಿಯನ್ನು ನೀಡಲು ತಿಳಿಸಲಾಗಿದೆ.

******** ಏನಿದು ಸುತ್ತೋಲೆ ವಿವಾದ ******
ಬೆಳಗಾವಿ : ಸದಾ ಒಂದಿಲ್ಲೊಂದು ವಿವಾದಗಳಿಂದ ಸುದ್ದಿಯಲ್ಲಿರುವ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಸಧ್ಯ ಮತ್ತೊಂದು ಯಡವಟ್ಟು ಮಾಡಿಕೊಂಡಿದೆ. ಪ್ರಸ್ತುತ ಶೈಕ್ಷಣಿಕ ವರ್ಷದ ಪದವಿ ವಿದ್ಯಾರ್ಥಿಗಳ ಪ್ರವೇಶಾತಿಗೆ ಹೆಚ್ಚಿನ ದಂಡ ವಿಧಿಸುವ ಮೂಲಕ ವಿದ್ಯಾರ್ಥಿಗಳಿಂದ ಹಗಲು ದರೋಡೆ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಕಳೆದ ದಿನಾಂಕ 12/09/2022 ರಂದು ಹೊರಡಿಸಿದ್ದ ಸುತ್ತೋಲೆಯಲ್ಲಿ ಪಿಯುಸಿ ಪೂರಕ ( Repeater ) ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರಸ್ತುತ ಶೈಕ್ಷಣಿಕ ವರ್ಷದ ಪದವಿ ಪ್ರವೇಶಕ್ಕೆ ದಿನಾಂಕ 22/09/22 ರ ವರೆಗೆ ದಂಡರಹಿತವಾಗಿ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದರು. ಇದರಲ್ಲಿ ಹೆಚ್ಚಿನ ತರಗತಿ ತಗೆದುಕೊಳ್ಳುವ ಷರತ್ತು ವಿಧಿಸಲಾಗಿತ್ತು. ಜೊತೆಗೆ ಸ. 22 ರ ನಂತರ ಯಾವುದೇ ಪ್ರವೇಶಾತಿಗೆ ಅವಕಾಶ ನಿರಾಕರಿಸಿದ್ದರು.
ಆದರೆ 20/09/2022 ರಂದು ಹೊರಡಿಸಿರುವ ನೂತನ ಸುತ್ತೋಲೆ ಪ್ರಕಾರ ಮೊದಲು ಕೊಟ್ಟ ದಿನಾಂಕವನ್ನು ತಿರುಚಿ ಸೆ. 15 ಕೊನೆಯ ದಿನಾಂಕ ಎಂದು ಸೃಷ್ಟಿ ಮಾಡಿದ್ದು ಈಗ ಪದವಿ ಪ್ರವೇಶಾತಿ ಬಯಸುವ ವಿದ್ಯಾರ್ಥಿಗಳು 1500 ದಂಡವಿದಿಸಿ ಪ್ರವೇಶಾತಿಗೆ ಅವಕಾಶ ಕಲ್ಪಿಸಿದ್ದಾರೆ. ಹಾಗೆ ನೋಡಿದರೆ ಮೊದಲು ಹೊರಡಿಸಿದ್ದ ಸುತ್ತೋಲೆ ಪ್ರಕಾರ ವಿದ್ಯಾರ್ಥಿಗಳಿಗೆ ದಂಡರಹಿತವಾಗಿ ಪದವಿ ಪ್ರವೇಶಾತಿ ಪಡೆಯಲು ಇನ್ನೂ ಎರಡು ದಿನ ಸಮಯಾವಕಾಶ ಇದ್ದರು ಕುಂಟು ನೆಪ ಹೇಳಿ ಬಡ ಮಕ್ಕಳಿಂದ ಹಣ ಕೀಳುವ ಕೆಟ್ಟ ಕೆಲಸಕ್ಕೆ ವಿಶ್ವವಿದ್ಯಾಲಯ ಕೈ ಹಾಕಿದೆಯಾ ಎಂಬ ಆರೋಪವನ್ನು ಸಾರ್ವಜನಿಕರು ಮಾಡುತ್ತಿದ್ದಾರೆ.
ಬಡತನದಿಂದ ಬೆಂದು ಪದವಿ ಪಡೆಯಲು ವಿಶ್ವವಿದ್ಯಾಲಯದ ಮೆಟ್ಟಿಲು ಹತ್ತುವ ಮಕ್ಕಳ ಭವಿಷ್ಯದ ಜೊತೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಚಲ್ಲಾಟ ಆಡುತ್ತಿದೆ ಎಂಬುದು ಇಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಕೂಡಲೇ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಅವರು ಇದಕ್ಕೆ ಪರಿಹಾರ ನೀಡಬೇಕು ಎಂಬುದು ವಿಧ್ಯಾರ್ಥಿಗಳ ವಾದವಾಗಿದೆ. ಒಂದು ಕಡೆ ಸಾವಿರಾರು ರೂ ಶುಲ್ಕ ಕಟ್ಟುವುದರ ಜೊತೆಗೆ 1500 ರೂ ದಂಡದ ಹೊರೆಯನ್ನು ಹೊರೆಸಲು ಏನು ಕಾರಣ ಎಂಬುದು ಸಧ್ಯದ ಪ್ರಶ್ನೆ.