
VIDEO : ಅಥಣಿ – ಗ್ರಾಮ ಪಂಚಾಯತಿ ಕಚೇರಿಯಲ್ಲಿ ಅಧ್ಯಕ್ಷೆ ಗಂಡನ ಹುಟ್ಟುಹಬ್ಬ ಆಚರಣೆ

ಅಥಣಿ : ತಾಲೂಕಿನ ಮದಭಾವಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಸವಿತಾ ಚೌಗುಲಾ ಎಂಬುವವರ ಪತಿ ಅಪ್ಪಾಸಾಹೇಬ್ ಚೌಗುಲಾ ಎಂಬುವವರು ಗ್ರಾಮ ಪಂಚಾಯತಿ ಕಚೇರಿಯಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡು ವಿವಾದ ಸೃಷ್ಟಿಸಿದ್ದಾರೆ.
ಸರ್ಕಾರಿ ಕಚೇರಿಗಳಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಅವಕಾಶ ಇಲ್ಲ ಎಂಬ ಕಾನೂನು ಇದ್ದರು ಅದನ್ನು ಗಾಳಿಗೆ ತೂರಿ ಅಪ್ಪಾಸಾಹೇಬ್ ಚೌಗುಲಾ ಎಂಬುವವರು ಮಾತ್ರ ಕಾನೂನು ಉಲ್ಲಂಘಿಸಿ ಹುಟ್ಟುಹಬ್ಬ ಆಚರಿಸಿಕೊಂಡ ವೀಡಿಯೋ ಸಧ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.