ಮುಸ್ಲಿಂ ಸಂಘಟನೆ ವಿರುದ್ಧ ಸಮರ ಸಾರಿದ ಚಾಣಕ್ಯರು
ಬೆಂಗಳೂರು : ದೇಶಾದ್ಯಂತ ಮತ್ತೊಮ್ಮೆ ರಾಷ್ಟ್ರೀಯ ತನಿಖಾ ದಳ (National Investigation Agency – NIA) ಮತ್ತು ಜಾರಿ ನಿರ್ದೇಶನಾಲಯಗಳು(ED) ಸಂಸ್ಥೆಗಳು ಏಕಕಾಲಕ್ಕೆ ಪಿಎಫ್ಐ ಕಚೇರಿ (Popular Front of India – PFI) ಮೇಲೆ ದಾಳಿ ನಡೆಸಿದ್ದು ಅನೇಕ ಮಹತ್ವದ ವಿಷಯ ಕಲೆ ಹಾಕುತ್ತಿದೆ.
ದೇಶಾದ್ಯಂತ ಇಂದು ಗುರುವಾರ ಬೆಳ್ಳಂಬೆಳಗ್ಗೆ 10ಕ್ಕೂ ಹೆಚ್ಚು ರಾಜ್ಯಗಳಲ್ಲಿ ಎನ್ಐಎ, ಇಡಿ ದಾಳಿ ಮುಂದುವರಿಸಿದ್ದು ರಾಜ್ಯದ ಪೊಲೀಸರ ನೆರವಿನೊಂದಿಗೆ ಪಿಫ್ಐ ಸಂಘಟನೆಯ 100ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ಭಯೋತ್ಪಾದನೆಗೆ ಧನಸಹಾಯ, ತರಬೇತಿ ಶಿಬಿರಗಳನ್ನು ಆಯೋಜಿಸುವುದು ಮತ್ತು ನಿಷೇಧಿತ ಸಂಸ್ಥೆಗಳಿಗೆ ಸೇರಲು ಜನರನ್ನು ಮೂಲಭೂತವಾಗಿ ರೂಪಿಸುವ ವ್ಯಕ್ತಿಗಳ ವಸತಿ ಮತ್ತು ಅಧಿಕೃತ ಆವರಣದಲ್ಲಿ ಈ ಹುಡುಕಾಟಗಳನ್ನು ನಡೆಸಲಾಗುತ್ತಿದೆ.
ಅಮಿತ್ ಶಾ ಮತ್ತು ಅಜಿತ್ ದೋವಲ್ ರಣತಂತ್ರ : ಹೌದು ಭಾರತದಲ್ಲಿನ ಉಗ್ರವಾದವನ್ನು ತೊಡೆದು ಹಾಕಲು ದೇಶದ ಗೃಹ ಸಚಿವ ಅಮಿಶ್ ಶಾ ಹಾಗೂ ಭಾರತದ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೇರಿಕೊಂಡು ಮಹತ್ವದ ನಿರ್ಧಾರ ಕೈಗೊಂಡಿದ್ದು, ಪಿಎಫ್ಐ (Popular Front of India – PFI) ಕಚೇರಿ ಮೇಲೆ ದಾಳಿ ನಡೆಸಿದೆ. ಇದರಂದ ದೇಶದಲ್ಲಿ ಕೋಮು ಸಂಘರ್ಷ ಉಂಟುಮಾಡುತ್ತಿರುವ ಅನುಮಾನದ ಮೇಲೆ ಈ ಕ್ರಮಕ್ಕೆ ಕೇಂದ್ರ ಮುಂದಾಗಿದೆ.
ಪಿಎಫ್ಐ ಬೆನ್ನು ಹುರಿ ಮುರಿಯಲು ಮುಂದಾದ ಚಾಣಕ್ಯ
ಅಮೀತ್ ಶಾ ಈವರೆಗೆ ಇಟ್ಟ ಯಾವುದೇ ಹೆಜ್ಜೆ ತಪ್ಪಿದ್ದಿಲ್ಲ. ಅದರಂತೆ ಈ ಬಾರಿ ಕೋಮ ಸಂಘರ್ಷ ಸೇರಿದಂತೆ ದೇಶದ ಆಂತರಿಕ ಭದ್ರತೆಗೆ ದಕ್ಕೆ ತರುವ ಕಾರಣಕ್ಕಾಗಿ ದೇಶದಲ್ಲಿ ಮುಸ್ಲಿಂ ಸಂಘಟನೆ ಮೇಲೆ ಗುರಿ ಇಟ್ಟಿದ್ದಾರೆ. ಹೌದು ಶಸ್ತ್ರಾಸ್ತ್ರ ತರಬೇತಿ ಹಾಗೂ ದೇಶದಲ್ಲಿ ಕೋಮು ಗಲಭೆ ಸೃಷ್ಟಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದ ಮುಸ್ಲಿಂ ಸಂಘಟನೆ ವಿರುದ್ಧ ಸಧ್ಯ ಕೇಂದ್ರ ಸರ್ಕಾರ ಎನ್ಐಎ ಸಂಘಟನೆ ಮುಂದೆಬಿಟ್ಟಿದೆ. ಅಷ್ಟೇ ಅಲ್ಲದೆ ಅಜಿತ್ ದೋವಲ್ ಮತ್ತು ಅಮಿತ್ ಶಾ ತುರ್ತು ಸಭೆ ಕೂಡಾ ನಡೆಸಿದ್ದಾರೆ.
ಏನಿದು ಎನ್ಐಎ
ಉಗ್ರಗಾಮಿ ಚಟುವಟಿಕೆಗಳು ಹಾಗೂ ಅದಕ್ಕೆ ಸಂಬಂಧಿಸಿದ ಆಯುಧಗಳ ಕಳ್ಳ ಸಾಗಾಣಿಕೆ, ಮಾದಕ ದ್ರವ್ಯ ಸಾಗಾಟ, ಭಾರತೀಯ ಕಳ್ಳ ನೋಟುಗಳ ಸಾಗಾಟ ಹಾಗೂ ಗಡಿಯಾಚೆಯಿಂದ ನುಸುಳುವಿಕೆ ಇತ್ಯಾದಿಗಳನ್ನೂ ಎನ್ಐಎ ವಿಚಾರಣೆ ನಡೆಸುತ್ತದೆ. ಎನ್ಐಎ ಸಂಸ್ಥೆಗೆ ಇಂತಹ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಶೋಧಿಸುವ, ದಾಖಲೆ ಹಾಗೂ ವಸ್ತುಗಳನ್ನು ವಶಪಡಿಸಿಕೊಳ್ಳುವ ಹಾಗೂ ಬಂಧಿಸುವ ಅಧಿಕಾರವೂ ಇದೆ. ಎನ್ಐಎ ಸಂಸ್ಥೆಯ ಪ್ರಧಾನ ಕಚೇರಿ ದೆಹಲಿಯಲ್ಲಿದ್ದು, ಹೈದರಾಬಾದ್, ಗುವಾಹಟಿ, ಕೊಚ್ಚಿ, ಲಕ್ನೋ, ಮುಂಬೈ, ಕಲ್ಕತ್ತಾ, ರಾಯಪುರ, ಜಮ್ಮು, ಚಂಡೀಗಢ, ರಾಂಚಿ, ಚೆನ್ನೈ, ಇಂಫಾಲ್, ಬೆಂಗಳೂರು ಹಾಗೂ ಪಾಟ್ನಾಗಳಲ್ಲಿ ಶಾಖಾ ಕಚೇರಿಗಳಿವೆ.