Select Page

Advertisement

ಬೆಳಗಾವಿ : ಹಸಿದವರ ಪಾಲಿಗೆ ಬೆಳಕಾದ ಅಂತರ್ಯಾಮಿ ಫೌಂಡೇಶನ್

ಬೆಳಗಾವಿ : ಹಸಿದವರ ಪಾಲಿಗೆ ಬೆಳಕಾದ ಅಂತರ್ಯಾಮಿ ಫೌಂಡೇಶನ್

ಬೆಳಗಾವಿ : ರಾತ್ರಿ ವೇಳೆ ನಗರದ ಬಸ್ ನಿಲ್ದಾಣ ಹಾಗೂ ರೈಲು ನಿಲ್ದಾಣಗಳಲ್ಲಿ ಹೊಟ್ಟೆ ಹಸಿವಿನಿಂದ ರಾತ್ರಿ ಕಳೆಯುವ ನಿರ್ಗತಿಕರ ಪಾಲಿಗೆ ಅಂತರ್ಯಾಮಿ ಫೌಂಡೇಶನ್ ಬೆಳಕಾಗಿದೆ.

ಬೆಳಗಾವಿಯ ಸಮಾಜಸೇವಕ ಹಾಗೂ ಯುವ ಮುಖಂಡ ನಾಗರಾಜ ಗಸ್ತಿ ಅವರ ಸ್ವಯಂ ಸೇವಾ ಸಂಸ್ಥೆಯಾದ ಅಂತರ್ಯಾಮಿ ಫೌಂಡೇಶನ್ ನ ಅನ್ನ ಸಂತರ್ಪಣಾ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ನಿತ್ಯ ಬೆಳಗಾವಿ ನಗರ ಬಸ್ ನಿಲ್ದಾಣಗಳಲ್ಲಿ, ರಸ್ತೆ ಬದಿಯಲ್ಲಿರುವ ಅನಾಥರಿಗೆ ಹಾಗೂ ನಿರಾಶ್ರಿತರಿಗೆ ಆಹಾರ ಕೊಟ್ಟು ಹಸಿವು ನೀಗಿಸುವ ಮಹತ್ವದ ಕೆಲಸ ಮಾಡುತ್ತಿದ್ದಾರೆ.

ಈ ಸಂದರ್ಭದಲ್ಲಿ ಸಂಸ್ಥೆಯ ಸದಸ್ಯರಾದ ಅಕ್ಷಯ್ ಹಿರೇಮಠ, ಸಿದ್ಧಪ್ರಸಾದ್, ಗಿರೀಶ್ ಬಡಿಗೇರ, ಪೂನಂ, ಸೋಮು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *