ಅಥಣಿ : ತಡರಾತ್ರಿ ಜನಿಸಿದ್ದ ನವಜಾತ ಶಿಶು ಕಳ್ಳತನ
ಅಥಣಿ : ತಾಲೂಕು ಆಸ್ಪತ್ರೆಯಲ್ಲಿದ್ದ ನವಜಾತ ಗಂಡು ಶಿಶುವನ್ನು ಕಳ್ಳತನ ಮಾಡಿದ ಘಟನೆಗೆ ನಡೆದಿದೆ.
ಅಥಣಿ ತಾಲೂಕು ಆಸ್ಪತ್ರೆಯಲ್ಲಿ ಹುಟ್ಟಿದ್ದ ಗಂಡು ಶಿಶುವನ್ನು ತೂಕ ಮಾಡಿಸಿಕೊಂಡು ಬರುವುದಾಗಿ ಹೇಳಿ
ಐನಾಪೂರ ಗ್ರಾಮದ ಅಂಬಿಕಾ ಅಮೀತ ಭೋವಿ ಎಂಬುವವರ ನವಜಾತ ಶಿಶುವನ್ನು ಕಳ್ಳತನ ಮಾಡಲಾಗಿದೆ.
ಮಂಗಳವಾರ ತಡರಾತ್ರಿ ಹುಟ್ಟಿದ್ದ ಗಂಡು ಮಗುವನ್ನು ತೂಕ ಮಾಡಿಸಿಕೊಂಡು ಬರುವುದಾಗಿ ಹೇಳಿ ಕಳ್ಳತನ ಮಾಡಲಾಗಿದೆ. ಸ್ಥಳಕ್ಕೆ ಅಥಣಿ ಪಿಎಸ್ಐ ಶಿವಶಂಕರ ಮುಕರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.