Select Page

VIDEO-ಎರಡು ವರ್ಷದ ಅವಧಿಯಲ್ಲಿ ಮೂವರು ಪ್ರಭಾವಿ ಲಿಂಗಾಯತ ನಾಯಕರನ್ನು ಕಳೆದುಕೊಂಡ ಬೆಳಗಾವಿ

VIDEO-ಎರಡು ವರ್ಷದ ಅವಧಿಯಲ್ಲಿ ಮೂವರು ಪ್ರಭಾವಿ ಲಿಂಗಾಯತ ನಾಯಕರನ್ನು ಕಳೆದುಕೊಂಡ ಬೆಳಗಾವಿ

ಬೆಳಗಾವಿ : ರಾಜ್ಯ ರಾಜಕಾರಣದಲ್ಲಿ ತನ್ನದೇ ಪ್ರಾಮುಖ್ಯತೆ ಹೊಂದಿರುವ ಜಿಲ್ಲೆ ಬೆಳಗಾವಿ. ಪ್ರಬಲ ಲಿಂಗಾಯತ ಸಮುದಾಯದ ಮುಂಖಂಡರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಬೆಳೆದಿದ್ದಾರೆ. ಆದರೆ ದುರಾದೃಷ್ಟವಶಾತ್ ಕಳೆದ ಎರಡು ವರ್ಷದ ಅವಧಿಯಲ್ಲಿ ಬೆಳಗಾವಿ ಜಿಲ್ಲೆ ಮೂವರು ಪ್ರಭಾವಿ ಲಿಂಗಾಯತ ಮುಖಂಡರರನ್ನು ಕಖೆದುಕೊಂಡಿರುವುದು ವಿಪರ್ಯಾಸ.

ಕೊರೋನಾ ಮಾಹಾಮಾರಿಯ ಹೊಡೆತಕ್ಕೆ ಸಿಲುಕಿ ಅಂದಿನ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿ. ಸುರೇಶ್ ಅಂಗಡಿಯವರು ಸಪ್ಟೆಂಬರ್ 23, 2020 ರಂದು ನಿಧನರಾಗಿದ್ದರು. ಸತತ ನಾಲ್ಕು ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದ ಇವರ ಅಕಾಲಿಕ ನಿಧನದಿಂದ ಜಿಲ್ಲೆಗೆ ತುಂಬಲಾರದ ನಷ್ಟ ಉಂಟಾಗಿತ್ತು.

ಇನ್ನೂ ದಿ. ಸುರೇಶ್ ಅಂಗಡಿ ನಿಧನದ ದುಃಖದಿಂದ ಜಿಲ್ಲೆಯ ಜನ ಹೊರಬರುವ ಹೊತ್ತಿಗೆ ಕಳೆದ ತಿಂಗಳಷ್ಟೇ ಬೊಮ್ಮಾಯಿ ಸರ್ಕಾರದಲ್ಲಿ ಸಚಿವರಾಗಿದ್ದ ಅರಣ್ಯ ಹಾಗೂ ಆಹಾರ ನಾಗರಿಕ ಸರಬರಾಜು ಸಚಿವರಾಗಿದ್ದ ಉಮೇಶ್ ಕತ್ತಿ ಅವರು ಸಪ್ಟೆಂಬರ್ 6. 2022 ರಂದು ಹೃದಯಾಘಾತದಿಂದ ನಿಧನ ಹೊಂದಿದ್ದರು. ಹುಕ್ಕೇರಿ ಮತಕ್ಷೇತ್ರದಿಂದ ಎಂಟು ಬಾರಿಗೆ ಶಾಸಕರಾರಿ ಆಯ್ಕೆಯಾಗಿದ್ದ ಇವರು ಉತ್ತರ ಕರ್ನಾಟಕದ ಗಟ್ಟಿ ಧ್ವನಿಯಾಗಿದ್ದರು.‌

ಉಮೇಶ್ ಕತ್ತಿ ಅವರ ಸಾವಿನ ನೋವಿನಿಂದ ಜಿಲ್ಲೆಯ ಜನ ಹೊರ ಬರುವ ಹೊತ್ತಿದೆ, ಸವದತ್ತಿ ಯಲ್ಲಮ್ಮ ಮತಕ್ಷೇತ್ರದ ಬಿಜೆಪಿ ಶಾಸಕ ಹಾಗೂ ವಿಧಾನಸಭೆ ಉಪ ಸಭಾಧ್ಯಕ್ಷ ಆನಂದ ಮಾಮನಿ ಅವರ ಸಾವು ಜನರಿಗೆ ಮತ್ತಷ್ಟು ನೋವುಂಟು ಮಾಡಿದೆ. ಪ್ರಭಾವಿ ಲಿಂಗಾಯತ ಸಮುದಾಯದ ಮುಖಂಡರಾಗಿದ್ದು ಈ ಮೂವರು ನಾಯಕರು ಅಧಿಕಾರದಲ್ಲಿದ್ದ ಸಂದರ್ಭದಲ್ಲೇ ಅಕಾಲಿಕವಾಗಿ ಸಾವನಪ್ಪಿದ್ದು ಕೇವಲ ಜಿಲ್ಲೆ ಮಾತ್ರವಲ್ಲ ರಾಜ್ಯ ರಾಜಕಾರಣಕ್ಕೂ ಬಹು ದೊಡ್ಡ ನಷ್ಟ. 

Advertisement

Leave a reply

Your email address will not be published. Required fields are marked *

error: Content is protected !!