Video – ಸವದತ್ತಿಗೆ ಬಂದ ಆನಂದ ಮಾಮನಿ ಮೃತದೇಹ : ಮುಗಿಲು ಮುಟ್ಟಿದ ಆಕ್ರಂದನ
ಸವದತ್ತಿ : ಸವದತ್ತಿ ಯಲ್ಲಮ್ಮ ಮತಕ್ಷೇತ್ರದ ಶಾಸಕ ಹಾಗೂ ವಿಧಾನಸಭೆ ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿ ಇಂದು ಬೆಳಗಿನ ಜಾವ ವಿಧಿವಶರಾಗಿದ್ದು, ಅವರ ಪಾರ್ಥಿವ ಶರೀರವನ್ನು ಸ್ವ ಕ್ಷೇತ್ರ ಸವದತ್ತಿಗೆ ತರಲಾಗಿದೆ
ನೆಚ್ಚಿನ ನಾಯಕನ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಕೂಡಾ ಸವದತ್ತಿಗೆ ಆಗಮಿಸುತ್ತಿದ್ದು ಸಂಜೆ ಮಾಮನಿ ಅಂತ್ಯಕ್ರಿಯೆ ನೆರವೇರಲಿದೆ.