Select Page

ಸವದಿ ಬಿಜೆಪಿ ಸೇರಿದರೆ ಸ್ವಾಗತ ಎಂದ ಸಾಹುಕಾರ್ ಹಿಂದಿನ ತಂತ್ರ ಏನು……?

ಸವದಿ ಬಿಜೆಪಿ ಸೇರಿದರೆ ಸ್ವಾಗತ ಎಂದ ಸಾಹುಕಾರ್ ಹಿಂದಿನ ತಂತ್ರ ಏನು……?

ಅಥಣಿ : ಲಕ್ಷ್ಮಣ ಸವದಿ ಬಿಜೆಪಿಗೆ ಬಂದರೆ ಸ್ವಾಗತ ಎಂದು ರಮೇಶ್ ಜಾರಕಿಹೊಳಿ ಹೇಳಿಕೆ ಹಿಂದೆ ಯಾವ ತಂತ್ರ ಅಡಗಿದೆ ಎಂಬ ಲೆಕ್ಕಾಚಾರ ಸಧ್ಯ ರಾಜಕೀಯ ವಲಯದಲ್ಲಿ ಜೋರಾಗಿ ಕೇಳಿಬರುತ್ತಿದೆ. ( Laxman Savadi )

ಚುನಾವಣೆ ಸಂದರ್ಭದಲ್ಲಿ ಲಕ್ಷ್ಮಣ ಸವದಿಗೆ ಟಿಕೆಟ್ ತಪ್ಪಿಸಿ ಆ ಜಾಗಕ್ಕೆ ಹಾಲಿ ಶಾಸಕ ಮಹೇಶ್ ಕುಮಠಳ್ಳಿಗೆ ಬಿಜೆಪಿ ಟಿಕೆಟ್ ಕೊಡಿಸುವಲ್ಲಿ ರಮೇಶ್ ಜಾರಕಿಹೊಳಿ ಯಶಸ್ವಿಯಾಗಿದ್ದರು.‌ ನಂತರ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಲಕ್ಷ್ಮಣ ಸವದಿ ಪ್ರಚಂಡ ಅಂತರದಿಂದ ಗೆಲುವು ಸಾಧಿಸುವ ಮೂಲಕ ಮತ್ತೊಮ್ಮೆ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದರು. ( Ramesh jarakiholi )

ಈ ಎಲ್ಲಾ ರಾಜಕೀಯ ಬೆಳವಣಿಗೆ ನಂತರ ಲಕ್ಷ್ಮಣ ಸವದಿ ಹಾಗೂ ರಮೇಶ್ ಜಾರಕಿಹೊಳಿ‌ ಪರಸ್ಪರ ಹೇಳಿಕೆ ನೀಡಿರಲಿಲ್ಲ. ಸಧ್ಯ ಆಪರೇಷನ್ ಹಸ್ತದ ವದಂತಿ ಜೋರಾದ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ಮತ್ತೊಂದು ಬಾಂಬ್ ಎಸೆದಿದ್ದು ಈ ಬಾರಿ ನೇರವಾಗಿ ಲಕ್ಷ್ಮಣ ಸವದಿ ಬಿಜೆಪಿಗೆ ಸ್ವಾಗತ ಕೋರಿದ್ದಾರೆ.

ಈ‌ ಮಾತಿನ ಹಿಂದೆ ಅನೇಕ ರಾಜಕೀಯ ಲೆಕ್ಕಾಚಾರ ಅಡಗಿದೆ‌. ಅವರ ರಾಜಕೀಯ ಬದ್ಧ ಎದುರಾಳಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಎದುರೇಟು ನೀಡಲು ಸಾಹುಕಾರ್ ಸವದಿಗೆ ಆಹ್ವಾನ ನೀಡಿದ್ದಾರೆ ಎಂಬ ಮಾತೂ ಬಲವಾಗಿ ಕೇಳಿಬರುತ್ತಿವೆ. ಹಾಗೆಯೇ ಲಕ್ಷ್ಮಣ ಸವದಿ ಅವರಿಗೂ ಬಿಜೆಪಿ ಸಚಿವಸ್ಥಾನ ನೀಡದ ಕಾರಣ ಅವರ ಅಸಮಾಧಾನವನ್ನು ಬಿಜೆಪಿಗೆ ಲಾಭ ಮಾಡುವ ಲೆಕ್ಕಾಚಾರವೂ ಅಡಿಗಿದೆ. ( bJP )

ನಾನು ಹಿಂದೆ ನೋಡಿದ್ದ ಸಿದ್ದರಾಮಯ್ಯ ಆಡಳಿಯ ವೈಖರಿ ಸಧ್ಯ ಇಲ್ಲ. ಅವರನ್ನು ಸ್ವ ಇಚ್ಛೆಯಂತೆ ಕಾರ್ಯ ನಿರ್ವಹಿಸಲು ಬಿಡುತ್ತಿಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ‌ ಅಭಿಪ್ರಾಯ ವ್ಯಕ್ತಪಡಿಸಿದರು. ( Congress )

ನಾನು ಕಳೆದ ಹದಿನೈದು ವರ್ಷಗಳಿಂದ ಸಿಎಂ ಸಿದ್ದರಾಮಯ್ಯ ಅವರನ್ನು ನೋಡುತ್ತಿರುವ. ಮೊದಲು ಕೊಟ್ಟ ಗಟ್ಟಿ ಆಡಳಿತ ಈಗ ಕೊಡಲು ಆಗುತ್ತಿಲ್ಲ‌. ಅವರನ್ನು ಆಡಳಿತದಲ್ಲಿ ಕಟ್ಟಿ ಹಾಕಲಾಗುತ್ತಿದೆ ಎಂದು ಆರೋಪಿಸಿದರು‌‌.

ಈ ಕುರಿತು ನಿನ್ನೆ ಮಾಧ್ಯಮಗಳ ಜೊತೆ ಮಾತನಾಡಿರುವ ಇವರು.‌ ಆಪರೇಷನ್ ಹಸ್ತಕ್ಕೆ ಒಳಗಾದವರು ಮೂರ್ಖರು. ಕಾಂಗ್ರೆಸ್ ಸರ್ಕಾರದಲ್ಲಿ ಯಾವುದು ಸರಿಯಿಲ್ಲ ಈಗಾಗಲೇ ಕಾಂಗ್ರೆಸ್ ಪಕ್ಷದ 25 ರಿಂದ 30 ಹಿರಿಯ ಶಾಸಕರು ಬಂಡಾಯದ ಬಾವುಟ ಹಾರಿಸಲು ಸಿದ್ದತೆ ಮಾಡಿಕೊಂಡಿದ್ದಾರೆ.

ಇದನ್ನು ಮರೆಮಾಚಿ, ಶಾಸಕರನ್ನು ಹೆದರಿಸಲು ಮಹಾ ನಾಯಕ ಕುತಂತ್ರ ಮಾಡಿ ಆಪರೇಷನ್ ಹಸ್ತ ವಿಚಾರವನ್ನು ಮುನ್ನೆಲೆಗೆ ತಂದಿದ್ದಾರೆ ಎಂದು ಪರೋಕ್ಷವಾಗಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದರು.

ಲಕ್ಷ್ಮಣ ಸವದಿಯನ್ನು ಬಿಜೆಪಿಗೆ ಕರೆತರಲು ಶೋಭಾ ಕರಂದ್ಲಾಜೆ ಆಹ್ವಾನ ವಿಚಾರ‌ ಮಾತನಾಡಿ. ಸ್ವಯಂಘೋಷಿತ ನಾಯಕರು ಪ್ರಚಾರಕ್ಕಾಗಿ ಹೇಳಿಕೆ ನೀಡುತ್ತಾರೆ. ಸವದಿ ಬಿಜೆಪಿ ಬರುವುದಾದರೆ ಬರಲಿ ಸ್ವಾಗತ ಮಾಡುತ್ತೇನೆ, ಸವದಿ ಆಗಮನ ನಮ್ಮ ಹೈಕಮಾಂಡ್ ಬಿಟ್ಟ ವಿಚಾರ ಎಂದು ತಿಳಿಸಿದರು.

ನಾನು ಕಾಂಗ್ರೆಸ್ ಮರಳಿ ಹೋಗುವುದಿಲ್ಲ. ನನ್ನ ರುಂಡ ಕೂಡಾ ಅಲ್ಲಿ ಹೋಗುವುದಿಲ್ಲ ನನ್ನ ರಾಜಕಾರಣ ಬಿಜೆಪಿಯಲ್ಲಿ ಮುಕ್ತಾಯ ನಾನು ಬಿಜೆಪಿ ಪಕ್ಷವನ್ನು ಬಿಟ್ಟು ಎಲ್ಲೂ ಹೋಗಿಲ್ಲ ಎಂದು ಹೇಳಿದರು. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ, ನಾನು ರಾಜ್ಯ ರಾಜಕಾರಣದಲ್ಲಿ ಇರುತ್ತೇನೆ. ನಮ್ಮ ಕುಟುಂಬಸ್ಥರು ಯಾರೆ ಕಾಂಗ್ರೆಸ್ ಪಕ್ಷದಿಂದ ಸ್ವರ್ಧೆ ಮಾಡಿದರು ನಾವು ಮಾತ್ರ ಬಿಜೆಪಿ ಪಕ್ಷದ ಪರವಾಗಿ ಕೆಲಸವನ್ನು ಮಾಡುತ್ತೇನೆ ಎಂದು ಹೇಳಿದರು.

Advertisement

Leave a reply

Your email address will not be published. Required fields are marked *

error: Content is protected !!