
ಮುಡಾ ಪ್ರಕರಣ ದೂರುದಾರ ಸ್ನೇಹಮಯಿ ಕೃಷ್ಣಗೆ ಜೈಲು ಶಿಕ್ಷೆ

ಮೈಸೂರು : ಚಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣ ಅವರಿಗೆ ಮೈಸೂರು ಕೋರ್ಟ್ 6 ತಿಂಗಳು ಜೈಲುಶಿಕ್ಷೆ ವಿಧಿಸಿದೆ.
ಮೈಸೂರಿನ ಜೆ.ಎಮ್.ಎಫ್.ಸಿ ನ್ಯಾಯಾಲಯವೂ ಮುಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣ ಅವರಿಗೆ 6 ತಿಂಗಳು ಜೈಲುಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಈ ಹಿಂದೆ ಪತ್ರಿಕೆ ನಡೆಸಲು ಹಾಗೂ ಮನೆಯ ಉಪಯೋಗಕ್ಕೆ ಲಲಿತಾಪುರದ ಕುಮಾರ್ ಎಂಬುವವರು 2015 ರಲ್ಲಿ ಸಾಲ ಪಡೆದಿದ್ದರು. ಇದಕ್ಕೆ ಪ್ರತಿಯಾಗಿ ಸ್ನೇಹಮಯಿ ಚಕ್ ನೀಡಿದ್ದರು.
ಕುಮಾರ್ ಹಣವನ್ನು ಬ್ಯಾಂಕ್ ಗೆ ಹಾಕಲು ಹೋದಾಗ ಚಕ್ ಬೌನ್ಸ್ ಆಗಿದೆ. ಈ ಕುರಿತು ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ್ದ ಕೋರ್ಟ್ ಆದೇಶ ಹೊರಡಿಸಿದೆ.