
ಪುನೀತ್ ನಿಧನ : ಕುಟುಂಬದವರಿಗೆ ಶ್ರೀಶೈಲ ಜಗದ್ಗುರುಗಳ ಸಾಂತ್ವನ

ಬೆಂಗಳೂರು : ಇತ್ತಿಚೆಗೆ ನಿಧನರಾದರ ಖ್ಯಾತ ಕನ್ನಡ ನಟ ಪುನೀತ್ ರಾಜಕುಮಾರ್ ಅವರ ಬೆಂಗಳೂರಿನ ನಿವಾಸಕ್ಕೆ ಭೇಟಿ ನೀಡಿದ, ಶ್ರೀ ಶ್ರೀಶೈಲ ಜಗದ್ಗುರು ಡಾ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಕುಟುಂಬದವರಿಗೆ ಸಾಂತ್ವನ ಹೇಳಿದರು.

ಶುಕ್ರವಾರ “ಕರ್ನಾಟಕ ರತ್ನ” ಪುನೀತ್ ರಾಜ್‍ಕುಮಾರ್ ಅವರ ಮನೆಗೆ ಶ್ರೀಶೈಲ ಜಗದ್ಗುರುಗಳು ಭೆಟಿ ನೀಡಿ ಭಾವಚಿತ್ರಕ್ಕೆ ಮಂಗಲಾಕ್ಷತೆ ಹಾಕಿ ಅವರ ಪರಿವಾರದವರಿಗೆ ಸಾಂತ್ವನ ಹೇಳಿ ಪುನೀತ್ ಪತ್ನಿ ಅಶ್ವಿನಿ ಅವರಿಗೆ ವಿಭೂತಿಯನ್ನು ಆಶೀರ್ವದಿಸಿದರು.