
ಇಸ್ತ್ರಿಗೆ ಮತ ಬೇಡಾ ಕವಟಗಿಮಠ ಅವರಿಗೆ ಕೊಡಿ : ಅಭಯ್ ಪಾಟೀಲ್

ಬೆಳಗಾವಿ : ಗ್ರಾಮ ಪಂಚಾಯತಿಗಳಿಗೆ ಅನುದಾನ ತರುವ ನಿಟ್ಟಿನಲ್ಲಿ ಪ್ರಯತ್ನ ಪಡುವ ವ್ಯಕ್ತಿ ಬೇಕು ಹೊರತಾಗಿ ಸದಸ್ಯರಿಗೆ ಇಸ್ತ್ರಿ ನೀಡುವ ಅಭ್ಯರ್ಥಿ ಬೇಡ ಎಂದು ಬೆಳಗಾವಿ ದಕ್ಷಿಣ ಶಾಸಕ ಅಜಯ್ ಪಾಟೀಲ್ ಹೇಳಿದರು.
ಇಂದು ನಗರದ ಸಿಪಿಎಡ್ ಕ್ರೀಡಾಂಗಣದಲ್ಲಿ ನಡೆದ ಜನಸ್ವರಾಜ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಇವರು. ಪ್ರತಿ ಭಾರಿ ನಡೆಯುವ ಅಧಿವೇಶನದಲ್ಲಿ ಗ್ರಾಮ ಪಂಚಾಯತಿಗಳ ಅನುದಾನದ ಕುರಿತು ಗಮನ ಸೆಳೆಯುವ ಮಹಾಂತೇಶ ಕವಠಗಿಮಠ ಅವರನ್ನು ಪರಿಷತ್ ಚುನಾವಣೆಯಲ್ಲಿ ಗೆಲ್ಲಿಸಬೇಕು. ಚುನಾವಣೆ ಸಂದರ್ಭದಲ್ಲಿ ಇಸ್ತ್ರಿ ಕೊಡುವ ಅಭ್ಯರ್ಥಿಗೆ ಮತ ನೀಡಬೇಕಾ ಎಂದು ಅಭಯ್ ಪಾಟೀಲ್ ಪ್ರಶ್ನಿಸಿದರು.
ಈ ಬಾರಿ ಅತ್ಯಧಿಕ ಮತಗಳಿಂದ ಮಹಾಂತೇಶ ಕವಠಗಿಮಠ ಅವರ ಗೆಲುವು ನಿಶ್ಚಿತ ಎಂದು ಅಭಯ್ ಪಾಟೀಲ್ ಹೇಳಿದರು. ಈ ಸಂದರ್ಭದಲ್ಲಿ ಬಿಜೆಪಿ ನಾಯಕರು ಉಪಸ್ಥಿತರಿದ್ದರು.