
ಲೋಕಾಯುಕ್ತ ಬಲೆಗೆ ರಾಯಬಾಗ ಪಶು ವೈದ್ಯಾಧಿಕಾರಿ ಸಂಜಯ್ ದುರ್ಗಣ್ಣವರ

ಬೆಳಗಾವಿ : ರಾಯಬಾಗ ತಾಲೂಕಿನ ನಿಲಜಿ ಪಶು ಚಿಕಿತ್ಸಾಲಯದ ಪಶುವೈದ್ಯಕೀಯ ಪರೀಕ್ಷಕ ಸಂಜಯ್ ದುರ್ಗಣ್ಣವರಗೆ ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂ ಬೆಳಗ್ಗೆ ಶಾಕ್ ನೀಡಿದ್ದಾರೆ.
ಪಶುವೈದ್ಯಕೀಯ ಇಲಾಖೆ ಅಧಿಕಾರಿ ಆಗಿರುವ ಸಂಜಯ್ ಅವರ ಮೇಲೆ ಅಕ್ರಮ ಹಣ ಗಳಿಕೆ ಆರೋಪದ ಮೇಲೆ ಪ್ರಕರಣ ದಾಖಲಾದ ಹಿನ್ನಲೆಯಲ್ಲಿ ಲೋಕಾಯುಕ್ತ ಎಸ್ಪಿ ಅನುಮಂತರಾಯ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.
ಬೆಳಗಾವಿಯ ಎರಡು ಕಡೆಗಳಲ್ಲಿ ಲೋಕಾಯುಕ್ತ ದಾಳಿ ನಡೆದಿದ್ದು, ಬೆಳಗಾವಿಯ ಅನಗೋಳದ ಸಬ್ ರಿಜಿಸ್ಟರ್ ಸಚಿನ್ ಮುಂಡೇದ ಅವರ ಮೇಲೆ ಮೇಲೆ ಲೋಕಾಯುಕ್ತ ಎಸ್ಪಿ ಅನುಮಂತರಾಯ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.
ಬೆಳಗಾವಿ ಉತ್ತರ ಸಬ್ ರಿಜಿಸ್ಟರ್ ಆಗಿರುವ ಸಚಿನ್ ಮೇಲೆ ಅಕ್ರಮ ಆಸ್ತಿ ಗಳಿಕೆಯ ಆರೋಪದ ಅಡಿ ಲೋಕಾಯುಕ್ತ ದಾಳಿ ನಡೆಸಿದ್ದು ದಾಖಲೆ ಪರಿಶೀಲಿಸುತ್ತಿದೆ.