VIDEO : ಸಾಹುಕಾರ್ ಮನಸ್ಸು ಮಾಡಿದ್ರ ಪ್ರಧಾನಮಂತ್ರಿ ಆಗ್ತಾನ : ಜಾರಕಿಹೊಳಿ Vs ಸವದಿ ಅಭಿಮಾನಿಗಳ ಬೀದಿ ಜಗಳದ ಆಡಿಯೋ ವೈರಲ್
ಬೆಳಗಾವಿ : ಬೆಳಗಾವಿ ರಾಜಕಾರಣದಲ್ಲಿ ತಮ್ಮದೇ ವೈಯಕ್ತಿಕ ವರ್ಚಸ್ಸು ಹೊಂದಿರುವ ಜಾರಕೊಹೊಳಿ ಹಾಗೂ ಲಕ್ಷ್ಮಣ ಸವದಿ ಹೆಸರುಗಳು ಯಾವತ್ತೂ ಶಾಶ್ವತ. ಇನ್ನೂ ಇವರ ಅಭಿಮಾನಿಗಳು ಅನೇಕ ಸಲ ಆರೋಪ ಪ್ರತ್ಯಾರೋಪದಲ್ಲಿ ತೊಡಗಿಕೊಂಡಿದ್ದು ಈ ಕುರಿತು ಆಡಿಯೋ ವೈರಲ್ ಆಗಿದ್ದು ನೀವೆ ಕೇಳಿ.
ಕಾಂಗ್ರೆಸ್ ನಿಂದ ಬಿಜೆಪಿಗೆ ಪಕ್ಷಾಂತರ ಮಾಡಿ ಸಧ್ಯ ಬಿಜೆಪಿ ಶಾಸಕರಾದ ರಮೇಶ್ ಜಾರಕಿಹೊಳಿ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರ ಅಭಿಮಾನಿಗಳ
ಮಧ್ಯೆ ನಡೆದ ಜಗಳದ ಆಡಿಯೋ ವೈರಲ್ ಆಗಿದೆ.ಅವರ
ಇನ್ನೂ ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಮಹೇಶ್ ಕುಮಠಳ್ಳಿ ಹಾಗೂ ಲಕ್ಷ್ಮಣ ಸವದಿ ಅಭಿಮಾನಿಗಳ ಜಗಳ ನಿರಂತರ ಇದ್ದೇ ಇದೆ. ಇದಕ್ಕೆ ಈವರೆಗೂ ಪರಿಹಾರ ಸಿಕ್ಕಿಲ್ಲ. ಜೊತೆಗೆ ರಮೇಶ್ ಜಾರಕಿಹೊಳಿ ಅಭಿಮಾನಿಗಳು ಆಗಾಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅನೇಕ ವಿಚಾರ ಹರಿಬಿಡುತ್ತಾರೆ.