
ಆಸ್ಪತ್ರೆಯಿಂದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಡಿಸ್ಚಾರ್ಜ್…!

ಬೆಳಗಾವಿ : ಭೀಕರ ರಸ್ತೆ ಅಪಘಾತದಲ್ಲಿ ಗಾಯಗೊಂಡು ಕಳೆದ ಹನ್ನೊಂದು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು ಮನೆಗೆ ತೆರಳಿದರು.
ಬೆನ್ನಿಗೆ ಬಲವಾದ ಪೆಟ್ಟಾದ ಹಿನ್ನಲೆಯಲ್ಲಿ ಸಚಿವರಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಶೀಘ್ರವಾಗಿ ಗುಣಮುಖರಾಗಿರುವ ಸಚಿವರು ಇನ್ನೂ ಕೆಲವು ದಿನ ವಿಶ್ರಾಂತಿ ಪಡೆಯಲಿದ್ದಾರೆ.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇವರು.
ನನ್ನ ಅಪಘಾತದ ಬಗ್ಗೆ ರಾಜಕೀಯ ಮಾಡುವ ವ್ಯಕ್ತಿಗಳು ಕಲ್ಲಿನ ಹೃದಯದವರು. ಅವರ ಬಗ್ಗೆ ಪ್ರತಿಕ್ರಿಯೆ ಕೊಡಲು ಹೋಗುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಸಾವು, ಬದುಕಿನ ಹೋರಾಟದಲ್ಲಿ ನಾನು ಗೆದ್ದು ಬಂದಿದ್ದೇನೆ. ವಿಪಕ್ಷದವರು ನನ್ನ ಅಪಘಾತದಲ್ಲಿ ಹಣ ಸಾಗಾಟ ಮಾಡುತ್ತಿದ್ದರು ಎನ್ನುವ ಆರೋಪಕ್ಕೆ ಪ್ರತಿಕ್ರಿಯೆ ನೀಡಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾರು ಅಪಘಾತದ ಬಗ್ಗೆ ತನಿಖೆ ನಡೆಸಲು ಸೂಚನೆ ನೀಡಲ್ಲ. ರಾಜ್ಯದ ಜನರ ಸೇವೆ ಮಾಡುವುದು ಒಂದೇ ನನ್ನ ಗುರಿ ಎಂದರು.
ನನ್ನ ಮೇಲೆ ಜವಾಬ್ದಾರಿ ಹೆಚ್ಚಿದೆ. ಮಾರ್ಚ್ ನಲ್ಲಿ ರಾಜ್ಯ ಬಜೆಟ್ ಇದೆ. ವೈದ್ಯರು ನನಗೆ ವಿಶ್ರಾಂತಿ ಪಡೆದುಕೊಳ್ಳಲು ಹೇಳಿದ್ದಾರೆ. ಮೊದಲು ರಾಜ್ಯದ ಅಭಿವೃದ್ಧಿ ಮುಖ್ಯ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕೆಲಸಗಳು ಸಾಕಷ್ಟು ಇವೆ. ಅದರ ಕಡೆ ಗಮನ ಹರಿಸುವೆ ಎಂದರು.
ನನಗೆ ಈ ದುರ್ಘಟನೆ ಆಗಬಾರದೀತ್ತು. ನನ್ನ ಕಷ್ಟ ಕಾಲದಲ್ಲಿ ರಾಜ್ಯದ ವಿವಿಧ ಮಠಾಧೀಶರು ಆಶೀರ್ವಾದ ಮಾಡಿದ್ದು ನನಗೆ ಶಕ್ತಿ ತಂದು ಕೊಟ್ಟಿತ್ತು. ಅಲ್ಲದೆ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸಚಿವ ಸಂಪುಟದ ಸಹೋದ್ಯೋಗಿಗಳು, ಹಾಲಿ, ಮಾಜಿ ಶಾಸಕರು, ನನ್ನ ಮತಕ್ಷೇತ್ರದ ಜನರು ಪೂಜೆ ಮಾಡಿ ನನ್ನ ಆರೋಗ್ಯ ಚೇತರಿಸಿಕೊಳ್ಳಲು ಹಾರೈಕೆ ಮಾಡಿದ್ದು ನನ್ನ ಪುಣ್ಯ ಎಂದರು.
ಮೈಕ್ರೋ ಫೈನಾನ್ಸ್ ಹಾವಳಿ ನಡೆಯುತ್ತಿರುವುದು ನನ್ನ ಗಮನಕ್ಕೆ ಆರು ತಿಂಗಳ ಹಿಂದೆಯೇ ನನ್ನ ಗನಕ್ಕೆ ಬಂದಿತ್ತು. ಆಗಲೇ ನಾನು ನಗರ ಪೊಲೀಸ್ ಇಲಾಖೆ ಆಯುಕ್ತರ ಗಮನಕ್ಕೆ ತಂದಿದ್ದೆ. ಅತಿ ಹೆಚ್ಚು ಯಮಕನಮರಡಿಯಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಇದೆ. ಇದಕ್ಕೆ ಕಡಿವಾಣ ಹಾಕಬೇಕೆಂದು ಸೂಚಿಸಿದ್ದೆ ಎಂದರು.
ಕಳೆದ 13 ದಿನಗಳು ಇಲ್ಲಿ ನನಗೆ ಆಸ್ಪತ್ರೆಗಿಂತ ಮನೆಯಂತೆ ಭಾಸವಾಯಿತು, ನೀವು ನನ್ನ ಕುಟುಂಬಕ್ಕಿಂತ ಕಡಿಮೆಯಿಲ್ಲದಂತೆ ನನ್ನನ್ನು ನೋಡಿಕೊಂಡಿದ್ದೀರಿ. ನನ್ನ ಕಷ್ಟದ ಸಮಯದಲ್ಲಿ, ನೀವು ನನ್ನ ಪಕ್ಕದಲ್ಲಿ ನಿಂತು, ಪ್ರಬಲವಾದ ಬೆಂಬಲ ಮತ್ತು ಕಾಳಜಿಯನ್ನು ತೋರಿಸಿದ್ದೀರಿ. ನಿಮ್ಮ ದಯೆ, ತಾಳ್ಮೆ ಮತ್ತು ಸಮರ್ಪಣೆ ಹೃದಯಸ್ಪರ್ಶಿಯಾಗಿತ್ತು ಎಂದರು.
ನೀವು ಹಗಲಿರುಳು ನನ್ನೊಂದಿಗೆ ಇದ್ದು ನಾನು ಸದೃಢವಾಗಲು ಕಾರಣರಾಗಿದ್ದೀರಿ ಮತ್ತು ಧೈರ್ಯ ಕಳೆದುಕೊಳ್ಳದಂತೆ ಪ್ರೇರೇಪಿಸಿದ್ದೀರಿ. ನಿಮ್ಮ ಪ್ರೋತ್ಸಾಹ ನನಗೆ ಶೀಘ್ರ ಗುಣಮುಖನಾಗಲು ಶಕ್ತಿಯನ್ನು ನೀಡಿತು ಮತ್ತು ನಿಮ್ಮ ಸಹಾನುಭೂತಿ ಮತ್ತು ಪರಿಣತಿಗೆ ನಾನು ಎಂದೆಂದಿಗೂ ಕೃತಜ್ಞನಾಗಿರುತ್ತೇನೆ. ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿ ಯಶ ಸಿಗಲಿ, ನಿಮಗೆ ಅತ್ಯಂತ ಉಜ್ವಲ ಭವಿಷ್ಯ ಮತ್ತು ಯಶಸ್ಸನ್ನು ಹಾರೈಸುತ್ತೇನೆ ಎಂದರು.