
ಬಿಗ್ ಬಾಸ್ ಫಿನಾಲೆ ; ಹೊರಬಿದ್ದ ಸ್ಪರ್ಧಿ ಇವರೇ ನೋಡಿ

ಬೆಂಗಳೂರು : ಕನ್ನಡ ಬಿಗ್ ಬಾಸ್ BBK – 11 ಫಿನೆಲೆ ವಾರ ಬಂದಿದ್ದು ಆರು ಜನ ಸ್ಪರ್ಧಿಗಳು ಫಿನಾಲೆ ವಾರ ತಲುಪಿದ್ದಾರೆ. ಇದರಲ್ಲಿ ಇಬ್ಬರು ಮನೆಯಿಂದ ಹೊರಬಂದಿದ್ದಾರೆ.
ಕನ್ನಡದ ಖ್ಯಾತ ಶೋ ಬಿಗ್ ಬಾಸ್ ಕನ್ನಡ ಅಂತೂ ಫೈನಲ್ ಘಟ್ಟ ತಲುಪಿದ್ದು ಖ್ಯಾತ ನಟ ಕಿಚ್ಚ ಸುದೀಪ್ ಅವರ ಕೊನೆಯ ನಿರೂಪಣೆ ಹೌದು. ಹೀಗಾಗಿ ಈ ವರ್ಷದ ಬಿಗ್ ಬಾಸ್ ಅನೇಕ ವಿಶೇಷತೆಗೆ ಸಾಕ್ಷಿಯಾಗಿದೆ.
ತೀವ್ರ ಕುತೂಹಲ ಘಟ್ಟ ತಲುಪಿರುವ ಬಿಗ್ ಬಾಸ್ ಶೋ ನಿಂದ ಆರು ಜನ ಸ್ಪರ್ಧಿಗಳಲ್ಲಿ ಈ ಇಬ್ಬರು ಮನೆಯಿಂದ ಆಚೆ ಹೋಗಿದ್ದು ಖಚಿತವಾಗಿದೆ. ಒಬ್ಬರು ಮೊದಲಿನಿಂದ ಸ್ಫರ್ಧಿಸಿರುವ ವ್ಯಕ್ತಿ ಆಗಿದ್ದರೆ ಇನ್ನೊಬ್ಬರು ವೈಲ್ಡ್ ಕಾರ್ಡ್ ಎಂಟ್ರಿ ಪಡೆದವರು.
ಬಿಗ್ ಬಾಸ್ ಫಿನಾಲೆ ವಾರದಲ್ಲಿ ಮೊದಲು Rajath ರಜತ್ ಔಟ್ ಆಗಿದ್ದರೆ ಎರಡನೇ ಸ್ಪರ್ಧಿಯಾಗಿ ಭವ್ಯ ಆಚೆ ಬಂದಿದ್ದಾರೆ. ಇನ್ನುಳಿದ ಮೋಕ್ಷಿತ, ತ್ರಿವಿಕ್ರಮ್, ಮಂಜು ಹಾಗೂ ಹನುಮಂತ ಫೈನಲ್ ನಲ್ಲಿ ಉಳಿದುಕೊಂಡಿದ್ದಾರೆ.
ಈ ಬಾರಿಯ ಬಿಗ್ ಬಾಸ್ ಇನ್ನೊಂದು ವಿಶೇಷ ಏನೆಂದರೆ ಫಿನಾಲೆ ಯಲ್ಲಿ ಮೊದಲ ಸ್ಥಾನ ಪಡೆಯುವ ಅಭ್ಯರ್ಥಿ 5 ಕೋಟಿಗೂ ಅಧಿಕ ವೋಟ್ ಪಡೆದಿಕೊಂಡಿದ್ದರೆ, ಅತ್ಯಂತ ಕಡಿಮೆ 60 ಲಕ್ಷಕ್ಕೂ ಅಧಿಕ ವೋಟ್ ಪಡೆದ ವ್ಯಕ್ತಿ ಮೊದಲಿಗೆ ಹೊರಬೀಳುತ್ತಿದ್ದಾರೆ.