ಹುಡುಗರ ಫ್ಯೂಸ್ ಕಿತ್ತ ಗೌಡ್ತಿಯ ಅಸಲಿ ಮುಖ ಹೊರಗೆಡವಿದ ಎರಡನೇ ಗಂಡ ಸುಧಾಕರ
ಬೆಳಗಾವಿ : ನಾನು ಕೋಟ್ಯಂತರ ರೂ. ಆಸ್ತಿ ಒಡೆತಿ ಇದ್ದೇನೆ. ನನ್ನ ಮಾವ ನನಗೆ ಗೃಹ ಬಂಧನದಲ್ಲಿಟ್ಟಿದ್ದ ಬೆಳಗಾವಿಯ ಅಲಾರವಾಡದ ಯುವಕನೊಂದಿಗೆ ಪ್ರೀತಿಯಾಗಿ ಮದುವೆಯಾಗಿದ್ದೇನೆ ಎಂದು ಹಸಿ ಹಸಿ ಸುಳ್ಳು ಹೇಳಿದ್ದ ಪ್ರಿಯಾಂಕಾ ಗೌಡಾ ಬೆಳಗಾವಿ ಯುವಕನ ಬಾಳಿಗೆ ಕೊಳ್ಳಿ ಇಟ್ಟಳಾ ಎನ್ನುವುದು ಜಾಹೀರಾಗಿದೆ.
ಕೋಟ್ಯಾಂತರ ರೂಪಾಯಿ ಒಡೆತಿ ಬೆಳಗಾವಿ ಸಾಮಾನ್ಯ ಎಲೆಕ್ಟ್ರಿಕಲ್ ಯುವಕನೊಂದಿಗೆ ಇನ್ ಸ್ಟಾ ಗ್ರಾಂನಲ್ಲಿ ಪ್ರೀತಿಸಿ ಮದುವೆಯಾಗಿದ್ದು ರಾಜ್ಯಾದ್ಯಂತ ಸದ್ದು ಮಾಡಿತ್ತು. ಆದರೆ ಪ್ರಿಯಾಂಕಾ ಗೌಡಾ ಅಮಾಯಕ ಬಡ ಯುವಕರನ್ನೇ ಬಳಸಿಕೊಂಡು ಮೋಸ ಮಾಡಿರುವ ವಿಷಯ ಆಕೆಯ ಎರಡನೇ ಪತಿ ಸುಧಾಕರ ಅಸಲಿ ಸತ್ಯ ಬಿಚ್ಚಿಟ್ಟಿದ್ದಾನೆ.
ವಾಟರ್ ಮ್ಯಾನ್ ಎಂದು ಕೆಲಸ ಮಾಡುತ್ತಿದ್ದ ಸುಧಾಕರ ಕಾರ್ ಬಾಡಿಗೆಗೆಂದು ಹೋದಾಗ ಈ ಡೌವ್ ರಾಣಿ ಪ್ರಿಯಾಂಕಾ ಗೌಡಾ ಪರಿಚಯವಾಗಿ ಮೊಬೈಲ್ ನಲ್ಲಿ ಮೆಸೇಜ್ ಮಾಡಿ ಒಂದು ವಾರ ಫೋನ್ ನಲ್ಲಿ ಮಾತನಾಡಿ ನೀನಂದರೆ ನನಗೆ ಇಷ್ಟ ಎಂದು ಈತನೊಂದಿಗೆ ಸ್ನೇಹ ಮಾಡಿ ಮದುವೆಯಾಗಿದ್ದಳಂತೆ.
ಆದರೆ ಈಕೆಯ ಬಳಿ ಕೋಟ್ಯಂತರ ರೂ. ಬೆಲೆ ಬಾಳುವ ಆಸ್ತಿ ಇದೆ ಎಂದಿದ್ದಳಂತೆ ಈ ಡೌವ್ ರಾಣಿ. ಈಕೆಯ ಬಳಿ ಇರುವ ಆಸ್ತಿ ಎಷ್ಟು ಎನ್ನುವುದನ್ನು ಆಕೆಯೇ ಬಹಿರಂಗಪಡಿಸಬೇಕು ಎನ್ನುವುದು ಸಾಮಾಜಿಕ ಜಾಲತಾಣದಲ್ಲಿ ಅತೃಪ್ತ ಅಂದಾ ಪ್ರೇಮಿಗಳ ಒತ್ತಾಯವಾಗಿದೆ.
ಪ್ರಿಯಾಂಕಾಳ ಎರಡನೇ ಪತಿ ಸುಧಾಕರ ಜೊತೆಗೆ ಮದುವೆಯಾಗುವ ಮುನ್ನವೂ ನಾನು ಕೋಟ್ಯಾಧಿಪತಿ ಇದ್ದೇನೆ ಎಂದಿದ್ದಳಂತೆ ಆದರೆ ಆಕೆಯ ಬಳಿ ಆಧಾರ ಕಾಡ್೯ ಬಿಟ್ಟರೆ ಯಾವುದೂ ಇರಲಿಲ್ಲವಂತೆ. ಬೆಳಗಾವಿಗೆ ಬಂದು
ಖಾನಾಪುರದಲ್ಲಿ ಪೊಲೀಸ್ ಠಾಣೆಯಲ್ಲಿ ಮಾವನ ವಿರುದ್ಧ ದೂರು ದಾಖಲಿಸಿರುವ ಪ್ರಿಯಾಂಕಾ ಸುಧಾಕರ ವಾಸ ಇರುವ ಪೊಲೀಸ್ ಠಾಣೆಯಲ್ಲಿ ಖಾನಾಪುರದಲ್ಲಿ ನನಗೆ ಅಪರಹಣ ಮಾಡಿದ್ದಾರೆ ಎಂದು ಹೇಳಿದ್ದಳಂತೆ. ಇದು ಪೊಲೀಸ್ ತನಿಖೆಯಿಂದ ಹೊರಬರಬೇಕು.
ಬೆಳಗಾವಿಯ ಅಲಾರವಾಡದ ಯುವಕನೊಂದಿಗೆ ಮೂರುನೇ ಮದುವೆಯಾಗಿರುವ ಪ್ರಿಯಾಂಕಾ ಗೌಡಾ ಬೆಳಗಾವಿ ಯುವಕನೊಂದಿಗೆ ಇನ್ ಸ್ಟಾಗ್ರಾಂ ನಲ್ಲಿ ಪರಿಚಯವಾಗಿದ್ದು ಬೆರಳಣಿಕೆಯ ದಿನಗಳ ಹಿಂದೆ ಅಷ್ಟೆ ಅಂತೆ ಇದು ಸಹ ಪೊಲೀಸ್ ಇಲಾಖೆಯ ತನಿಖೆಯಿಂದ ಹೊರಬರಬೇಕು. ಕಾರಣ ಇವರು ಮದುವೆಯಾಗಿ ಪೊಲೀಸರ ಮೊರೆ ಹೊಗಿದ್ದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ಪ್ರಿಯಾಂಕಾ ಗೌಡಾ ಈ ಡೌವ್ ರಾಣಿ ಅನಾಥೆಯಲ್ಲ. ಈಕೆಗೆ ಕುಟುಂಬ ಇದೆ ಎನ್ನುವ ಚರ್ಚೆಯೂ ನಡೆಯುತ್ತಿದೆ. ಇದರ ಬಗ್ಗೆ ಸ್ವತಃ ಆಕೆಯೆ ಮುಂದೆ ಬಂದು ಬಹಿರಂಗಪಡಿಸಬೇಕಿದೆ. ಬೆಳಗಾವಿ ಅಲಾರವಾಡದ ಅಮಾಯಕ ಯುವಕನಿಗೆ ನ್ಯಾಯ ಸಿಗಬೇಕಿದೆ.