Select Page

ಆಸ್ತಿ ವಿಚಾರಕ್ಕೆ ಜಗಳ ; ಸ್ವಂತ ತಂಗಿಯನ್ನೇ ಕೊಂದ ಅಣ್ಣ

ಆಸ್ತಿ ವಿಚಾರಕ್ಕೆ ಜಗಳ ; ಸ್ವಂತ ತಂಗಿಯನ್ನೇ ಕೊಂದ ಅಣ್ಣ

ಗದಗ : ಆಸ್ತಿಯ ವಿಚಾರವಾಗಿ ಒಡಹುಟ್ಟಿದ ಸಹೋದರಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಸಹೋದರ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಗದಗದ ಮುಂಡರಗಿಯಲ್ಲಿ ನಡೆದಿದೆ.

ಮುಂಡರಗಿಯ ಕಾವ್ಯ ( 32 ) ಕೊಲೆಯಾದ ಮಹಿಳೆ.‌ ಈಕೆ ಈ ಹಿಂದೆ ಪ್ರಶಾಂತ ಹಡಪದ ಎಂಬಾತನ ಜೊತೆ ಅಂತರ್ಜಾತಿ ವಿವಾಹ ಮಾಡಿಕೊಂಡಿದ್ದಳು. ನಂತರ ಸಹೋದ ಈಶಪ್ಪ ಕ್ಯಾದಗಿಹಳ್ಳಿ ಮನೆಗೆ ಬಂದು ಆಸ್ತಿಗಾಗಿ ಜಗಳ‌ ಮಾಡುತ್ತಿದ್ದಳು. ಈ ಕುರಿತು ಪೊಲೀಸ್ ಠಾಣೆಗೆ ಕೇಸ್ ದಾಖಲಿಸಲು ಮುಂದಾಗಿದ್ದಳು.

ಮಂಗಳವಾರ ಮತ್ತೆ ಅಣ್ಣನ ಮನೆಗೆ ಬಂದಿದ್ದ ಕಾವ್ಯಾ ಆಸ್ತಿ ಕುರಿತು ಜಗಳ ಪ್ರಾರಂಭಿಸಿದ್ದಳು. ಇಬ್ಬರ ಮಧ್ಯೆ ಜಗಳ ವಿಕೋಪಕ್ಕೆ ತೆರಳಿ ಮಹಿಳೆಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

ಕೊಲೆ ಮಾಡಿದ ನಂತರ ಈಶಪ್ಪ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.‌ ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!