ಕನ್ನಡ ಬಿಗ್ ಬಾಸ್ ನಿಂದ ಐಶ್ವರ್ಯ ಸಿಂಧೋಗಿ ಔಟ್…?
ಬೆಂಗಳೂರು : ಕನ್ನಡ ಬಿಗ್ ಬಾಸ್ ಸ್ಪರ್ಧೆಯಿಂದ ಈ ವಾರ ಯಾರು ಮನೆಯಿಂದ ಹೊರ ಹೋಗುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಸಧ್ಯ ಈ ಸ್ಪರ್ಧಿ ಮನೆಯಿಂದ ಹೊರ ಹೋಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಕನ್ನಡ ಕಿರುತೆರೆ ಮೂಲಕ ಮನರಂಜನೆ ನೀಡಿದ್ದ ಐಶ್ವರ್ಯ ಸಿಂಧೋಗಿ ಈ ವಾರ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ. ಈ ಕುರಿತು ಸ್ಪಷ್ಟ ಮಾಹಿತಿ ಭಾನುವಾರದ ಸಂಚಿಕೆಯಿಂದ ಹೊರಬರಲಿದೆ.
ಇನ್ನೇನು ಕೆಲವೇ ವಾರಗಳಲ್ಲಿ ಮುಕ್ತಾಯವಾಗಲಿರುವ ಬಿಗ್ ಬಾಸ್ ಸ್ಫರ್ಧೆಯಿಂದ ಒಂದೊಂದಾಗಿ ಸ್ಪರ್ಧಿಗಳು ಹೊರಬೀಳುತ್ತಿದ್ದಾರೆ.