
ಗೆದ್ದರು ಸೋತೆ ಎಂದು ಭಾವಿಸಿ ಮನೆಗೆ ಹೋದ ಕಾಂಗ್ರೆಸ್ ಅಭ್ಯರ್ಥಿ

ಬೆಳಗಾವಿ : ಸಾಮಾನ್ಯವಾಗಿ ಚುನಾವಣೆ ಮತ ಎಣಿಕೆ ಸಂದರ್ಭದಲ್ಲಿ ಸೋಲು ಗೆಲುವಿನ ಲೆಕ್ಕಾಚಾರವೇ ನಿರ್ಣಾಯವಾಗಿರುತ್ತದೆ ಆದರೆ ಇಲ್ಲೊಬ್ಬ ಅಭ್ಯರ್ಥಿ ಗೆದ್ದಿದ್ದೇನೆ ಎಂದುಕೊಂಡವನು ಸೋತಿದ್ದಾನೆ ಜೊತೆಗೆ ಸೋತೆ ಎಂದು ಮನೆಗೆ ಹೋದವನು ಗೆಲುವು ಸಾಧಿಸಿದ್ದಾನೆ.
ವಾರ್ಡ ನಂ 8 ಬಿಜೆಪಿ ಅಭ್ಯರ್ಥಿ ಜ್ಯೋತಿಬಾ ನಾಯ್ಕ್ 1151 ಮತ ಪಡೆದು ಗೆಲುವು ಸಾಧಿಸಿದ್ದೇನೆ ಎಂದು ತಿಳಿದು ವಿಜಯೋತ್ಸವ ಆಚರಿಸಿ ಮನೆಗೆ ಹೋಗಿದ್ದಾನೆ. ಅದೇ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಹಿಲ್ ಸಂಗೊಳ್ಳಿ ಗೆದ್ದಿರುವ ಮತಗಳನ್ನು ಗಮನಿಸದೆ ಸೋತೆ ಎಂದು ಭಾವಿಸಿ ಮನೆಗೆ ತೆರಳಿದ ಘಟನೆ ನಡೆದಿದೆ.
ನಂತರ ಪಕ್ಷೇತರ ಅಭ್ಯರ್ಥಿ ಮತ ಗಳಿಕೆ ಲೀಸ್ಟ್ ಹಿಡಿದು ಹೊರಬಂದಾಗ ಗೊತ್ತಾಗಿದ್ದು ಗೆದ್ದಿರುವುದು ಕಾಂಗ್ರೆಸ್ ಅಭ್ಯರ್ಥಿ ಎಂದು. ಸೋತ ನೋವಿನಲ್ಲಿ ಮನೆಗೆ ಹೋಗಿದ್ದ ಅಭ್ಯರ್ಥಿ ಕೆಲವು ಗಂಟೆಗಳ ನಂತರ ವಾಪಸ್ ಮತ ಎಣಿಕೆ ಕೇಂದ್ರಕ್ಕೆ ವಾಪಸ್ಸಾಗಿದ್ದಾನೆ. ಇತ್ತ ಸೋತ ಅಭ್ಯರ್ಥಿ ಬಂದ ದಾರಿಗೆ ಸುಂಕ ಇಲ್ಲವೆಂಬಂತೆ ಮನೆಗೆ ವಾಪಸ್ಸಾಗಿದ್ದಾನೆ.