ಬಿಜೆಪಿ ಗೆಲುವಿಗೆ ಡಾ. ಸೋನಾಲಿ ಹರ್ಷ
ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು ನನಗೆ ಸಂತಸ ಉಂಟು ಮಾಡಿದೆ. ಬಿಜೆಪಿ ಆಡಳಿತ ಮೆಚ್ಚಿ ಜನ ನಮಗೆ ಸ್ಪಷ್ಟ ಬಹುಮತ ನೀಡಿದ್ದಾರೆ ಎಂದು ಬಿಜೆಪಿ ಮಹಿಳಾ ಮುಖಂಡರಾದ ಡಾ. ಸೋನಾಲಿ ಸರ್ನೊಬತ್ ಹೇಳಿದರು.
ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜನರು ಅಭಿವೃದ್ಧಿ ನೋಡಿ ಬಿಜೆಪಿಗೆ ಮತ ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ಬೆಳಗಾವಿಯಲ್ಲಿ ನಮ್ಮ ಪಕ್ಷ ಉತ್ತಮ ಆಡಳಿತ ನೀಡಿ ಜನಪರ ಸೇವೆ ಮಾಡಲಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯ ಕಾಮಗಾರಿಗಳಿಗೆ ವೇಗ ನೀಡುತ್ತೇವೆ ಎಂದರು.
ವೀನಾ ಬಿಜಾಪುರೆ ಗೆಲುವಿಗೆ ಹರ್ಷ : ವಾರ್ಡ ನಂ 31 ರ ಬಿಜೆಪಿ ಅಭ್ಯರ್ಥಿ ವೀನಾ ವಿಜಾಪುರೆ ಅವರ ಗೆಲುವಿಗೆ ಡಾ.ಸೋನಾಲಿ ಹರ್ಷ ವ್ಯಕ್ತಪಡಿಸಿದರು. ಜನಪರ ಕಾಳಜಿ ಇರುವ ವ್ಯಕ್ತಿಗೆ ಜನ ಮತ ನೀಡಿದ್ದು ಮುಂಬರುವ ದಿನಗಳಲ್ಲಿ ಜನರ ಸೇವೆ ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದರು.