
ಕುಂಭಮೇಳದಲ್ಲಿ ಭಾರೀ ಕಾಲ್ತುಳಿತ – ಪವಿತ್ರ ಸ್ನಾನ ನಿರಾಕರಿಸಿದ ಸಾಧುಗಳು

ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಇಂದು ಮೌನಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಲಕ್ಷಾಂತರ ಮಂದಿ ಭಕ್ತರು ಆಗಮಿಸಿದ್ದು, ಭಾರೀ ಕಾಲ್ತುಳಿತ ಉಂಟಾಗಿದೆ. ಪರಿಣಾಮ ಅಘೋರಿ, ನಾಗಸಾಧುಗಳು ಪವಿತ್ರ ಸ್ನಾನವನ್ನು ರದ್ದುಗೊಳಿಸಿದ್ದಾರೆ.
ಮೌನಿ ಅಮಾವಾಸ್ಯೆಯ ಹಿನ್ನಲೆ ಇಂದು ಪವಿತ್ರ ಸ್ನಾನ ಮಾಡಲು ಲಕ್ಷಾಂತರ ಜನ ಆಗಮಿಸಿದ್ದರು, ಈ ವೇಳೆ ಭಾರೀ ನೂಕು ನುಗ್ಗಲಿನ ಕಾರಣದಿಂದಾಗಿ ಹಲವಾರು ಮಂದಿ ಗಾಯಗೊಂಡಿದ್ದು, ನೂರಾರು ಜನ ಅಸ್ವಸ್ಥರಾಗಿದ್ದಾರೆ ಎಂದು ವರದಿಯಾಗಿದೆ.
ಈ ಹಿನ್ನಲೆ ಅಖಿಲ ಭಾರತೀಯ ಅಖಾರ ಪರಿಷತ್ ಅಧ್ಯಕ್ಷ ಮಹಂತ್ ರವೀಂದ್ರ ಪುರಿ ಮಾತನಾಡಿ, ಬೆಳಿಗ್ಗೆ ಏನಾಯಿತು ಎಂದು ನೀವು ನೋಡಿದ್ದೀರಿ, ಅದಕ್ಕಾಗಿಯೇ ನಮ್ಮ ಎಲ್ಲಾ ಸಂತರು ಮತ್ತು ದಾರ್ಶನಿಕರು, ನಾಗಸಾಧುಗಳು, ಅಘೋರಿಗಳು ಮೌನಿ ಅಮವಾಸ್ಯೆಯ ಅಮೃತ ಸ್ನಾನವನ್ನು ರದ್ದುಗೊಳಿಸಿದ್ದಾರೆ.
ಎಂದಿನಂತೆ ಬೆಳಗ್ಗೆ 45 ನಿಮಿಷ ನಮಗೆ ಸ್ನಾನಕ್ಕೆ ಸಮಯ ನಿಗದಿ ಪಡಿಸಲಾಗಿದೆ. ಆದರೆ ಘಟನೆಯಿಂದಾಗಿ ಬಹಳ ಬೇಸರವಾಗಿದೆ, ಅಲ್ಲದೇ ಒಂದು ವೇಳೆ ನಾವು ಕೂಡ ಸ್ನಾನಕ್ಕೆ ಮುಂದಾದರೆ ಕಾಲ್ತುಳಿತ ಹೆಚ್ಚಾಗುತ್ತದೆ. ಹೀಗಾಗಿ ಇಂದು ನಾವು ಸ್ನಾನ ಮಾಡುವುದಿಲ್ಲ ಎಂದು ಮಹಂತ್ ರವೀಂದ್ರ ಪುರಿ ತಿಳಿಸಿದರು. ( MahakumbhStampede )