
ಕುಂಬಮೇಳ ಕಾಲ್ತುಳಿತದಲ್ಲಿ ಸಿಲುಕಿದ ಬೆಳಗಾವಿ ಇಬ್ಬರು ಬಿಜೆಪಿ ಕಾರ್ಯಕರ್ತೆಯರು

ಬೆಳಗಾವಿ : ಮೌನಿ ಅಮವಾಸ್ಯೆ ಹಿನ್ನಲೆಯಲ್ಲಿ ಬುಧವಾರ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಕೋಟ್ಯಾಂತರ ಜನ ಆಗಮಿಸಿದ್ದ ಸಂದರ್ಭದಲ್ಲಿ ಕಾಲ್ತುಳಿತ ಘಟನೆ ಸಂಭವಿಸಿದ್ದು, ಬೆಳಗಾವಿ ಮೂಲದ ಇಬ್ಬರು ಬಿಜೆಪಿ ಕಾರ್ಯಕರ್ತರು ಸೇರಿ ನಾಲ್ವರಿಗೆ ಗಾಯವಾಗಿದೆ.
ಬೆಳಗಾವಿ ನಗರದ ವಡಗಾವಿ ನಿವಾಸಿಗಳಾದ ಸರೋಜಿನಿ ನಡುವಿನಹಳ್ಳಿ, ಶೆಟ್ಟಿಗಲ್ಲಿಯ ನಿವಾಸಿಗಳಾದ ಅರುಣ್ ಕೋಪರ್ಡೆ, ಕಾಂಚನ್ ಕೋಪರ್ಡೆ ದಂಪತಿ ಸೇರಿದಂತೆ ಇಬ್ಬರು ಹೆಣ್ಣುಮಕ್ಕಳಿಗೆ ಕಾಲ್ತುಳಿತದಲ್ಲಿ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಇದೆ.
ಪ್ರಯಾಗರಾಜ್ ನ ಕುಂಭಮೇಳಕ್ಕೆ ತೆರಳಿದ ಬೆಳಗಾವಿ ಬಿಜೆಪಿ ಮುಖಂಡ ಮಹಾಂತೇಶ್ ವಕ್ಕುಂದ ಅವರು ಅಲ್ಲಿನ ಸಧ್ಯದ ಪರಿಸ್ಥಿತಿ ಕುರಿತು ವೀಡಿಯೋ ಮಾಹಿತಿ ಹಂಚಿಕೊಂಡಿದ್ದು, ಕುಂಭಮೇಳಕ್ಕೆ ಬರುವ ಜನ ಯಾವೆಲ್ಲ ಎಚ್ಚರಿಕೆ ತಗೆದುಕೊಳ್ಳಬೇಕು ಎಂಬುದನ್ನು ವಿವರಿಸಿದ್ದಾರೆ.