
ಕುಂಬಮೇಳ ಕಾಲ್ತುಳಿತ ; ಬೆಳಗಾವಿಯ ತಾಯಿ, ಮಗಳು ಸಾವು

ಬೆಳಗಾವಿ : ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಕಾಲ್ತುಳಿತ ಸಂಭವಿಸಿದ್ದು, ಬೆಳಗಾವಿ ಮೂಲದ ತಾಯಿ, ಮಗಳು ಮೃತಪಟ್ಟಿದ್ದು ದೃಢವಾಗಿದೆ.
ನಗರದ ವಡಗಾವಿ ನಿವಾಸಿಗಳಾದ ಜ್ಯೋತಿ ಹತ್ತರವಾಠ ( 50 ) , ಹಾಗೂ ಮೇಘಾ ಹತ್ತರವಾಠ ಮೃತಪಟ್ಟಿದ್ದು ದೃಢವಾಗಿದೆ.
ಕಳೆದ ಜನವರಿ 26 ರ ಮಧ್ಯಾಹ್ನ 1 ಗಂಟೆಗೆ ಬೆಳಗಾವಿಯ ಸಾಯಿರಥ ಟ್ರ್ಯಾವಲ್ ಎಜೆನ್ಸಿ ಮೂಲಕ 13 ಜನರಿದ್ದ ತಂಡ ಪ್ರಯಾಗರಾಜ್ ಗೆ ತೆರಳಿತ್ತು.