
ಕುಂಭಮೇಳ ಕಾಲ್ತುಳಿತ ; ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ

ಬೆಳಗಾವಿ : ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಕಾಲ್ತುಳಿತ ಸಂಭವಿಸಿದ್ದು, ಬೆಳಗಾವಿ ಮೂಲದ ತಾಯಿ, ಮಗಳ ಜೊತೆ ಇನ್ನೋರ್ವರು ಮೃತಪಟ್ಟಿದ್ದು ತಿಳಿದುಬಂದಿದೆ.
ನಗರದ ವಡಗಾವಿ ನಿವಾಸಿಗಳಾದ ಜ್ಯೋತಿ ಹತ್ತರವಾಠ ( 50 ) , ಹಾಗೂ ಮೇಘಾ ಹತ್ತರವಾಠ ಹಾಗೂ ಅರುಣ್ ಕೋರ್ಪಡೆ ಮೃತಪಟ್ಟಿದ್ದು ದೃಢವಾದಿದೆ.
ಕುಂಭಮೇಳದಲ್ಲಿ ಸಂಭವಿಸಿದ ಈ ಕಾಲ್ತುಳಿತದಲ್ಲಿ ಬೆಳಗಾವಿ ಮೂಲದ ಹತ್ತಾರು ಜನ ಕಾಣೆಯಾಗಿದ್ದು ಸಧ್ಯ ಸಾವಿನ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.