Select Page

Video – ಹಿಂದೂಗಳೇ ನಿಮ್ಮ ಮನೆಗಳಲ್ಲಿ ಶಸ್ತ್ರಾಸ್ತ್ರ ಇಟ್ಟುಕೊಳ್ಳಿ : ಮುತಾಲಿಕ್ ಪ್ರಚೋದನಕಾರಿ ಹೇಳಿಕೆ

Video – ಹಿಂದೂಗಳೇ ನಿಮ್ಮ ಮನೆಗಳಲ್ಲಿ ಶಸ್ತ್ರಾಸ್ತ್ರ ಇಟ್ಟುಕೊಳ್ಳಿ : ಮುತಾಲಿಕ್ ಪ್ರಚೋದನಕಾರಿ ಹೇಳಿಕೆ

ಧಾರವಾಡ : ಇವತ್ತಲ್ಲ ನಾಳೆ ಬೀದಿ ಕಾಳಗ ನಡೆಯಬಹುದು ಈ ಉದ್ದೇಶದಿಂದ ಪ್ರತಿಯೊಬ್ಬ ಹಿಂದುವಿನ ಮನೆಯಲ್ಲಿ ಕತ್ತಿ, ಖಡ್ಗ, ತಲ್ವಾರ್ ನಂತಹ ಒಂದು ಶಸ್ತ್ರವನ್ನು ಇಡಲೇಬೇಕು ಎಂದು ಶ್ರೀರಾಮ ಸೇನೆ ರಾಷ್ಟ್ರಾಧ್ಯಕ್ಷ ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಹಿಂದೂಗಳೇ ನಿಮ್ಮ ಮನೆಗಳಲ್ಲಿ ಶಸ್ತ್ರಾಸ್ತ್ರ ಇಟ್ಟುಕೊಳ್ಳಿ : ಮುತಾಲಿಕ್ ಪ್ರಚೋದನಕಾರಿ ಹೇಳಿಕೆ

ಕಾರ್ಯಕ್ರಮ ಒಂದರಲ್ಲಿ ಪ್ರಮೋದ್ ಮುತಾಲಿಕ್ ಮಾತನಾಡಿರುವ ವೀಡಿಯೋ ತುಣುಕು ಸಧ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಡಿಜೆ ಹಳ್ಳಿ, ಕೆಜೆ ಹಳ್ಳಿಯಂತ ಘಟನೆಗಳ ನೆನಪು ಇರಬೇಕು. ಇವತ್ತಲ್ಲ ನಾಳೆ ಬೀದಿ ಕಾಳಗ ಉಂಟಾಗುತ್ತವೆ. ಆ ಸಂದರ್ಭದಲ್ಲಿ ನಮ್ಮ ರಕ್ಷಣೆಗಾಗಿ ಶಸ್ತ್ರಾಸ್ತ್ರಗಳು ಬೇಕೆ ಬೇಕು ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ದೇಶದ ಒಳಗಡೆ ಸೇರಿರುವ ಶತ್ರುಗಳನ್ನು ಗುರುತಿಸೋಣ. ನಮ್ಮ ದೇವಸ್ಥಾನಗಳನ್ನು ರಕ್ಷಣೆ ಮಾಡಿಕೊಳ್ಳೋಣ. ನಮ್ಮ ಅಕ್ಕ ತಂಗಿಯರ ಮಾಂಗಲ್ಯ ರಕ್ಷಿಸೋಣ ಎಂದು ವೀಡಿಯೋದಲ್ಲಿ ಹೇಳಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!