
9 ತಿಂಗಳ ಮಗುವನ್ನು ಕೊಂದು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

ಬೆಂಗಳೂರು : ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಒಂಬತ್ತು ತಿಂಗಳ ಮಗುವನ್ನು ಕೊಂದು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ತಿಗಳರಪಾಳ್ಯದಲ್ಲಿ ನಡೆದಿದೆ.
ಶಾಸಕ ಪತ್ರಿಕೆಯ ಸಂಪಾದಕ ಹಲ್ಲೆಗೆರೆ ಶಂಕರ್ ಕುಟುಂಬದ ಭಾರತಿ(50) ಸಿಂಚನಾ(33) ಸಿಂಧೂರಾಣಿ(30) ಮಧು ಸಾಗರ್(27) ಸೇರಿದಂತೆ ಒಂಬತ್ತು ತಿಂಗಳ ಮಗು ಸಾವನಪ್ಪಿದ್ದು ಮೂರು ವರ್ಷದ ಪ್ರೇಕ್ಷಾ ಪ್ರಾಣಾಪಾಯದಿಂದ ಪಾರಾಗಿದೆ.
ಕೌಟುಂಬಿಕ ಕಲಹದಿಂದ ಬೇಸತ್ತಿದ್ದ ಇವರ ಮನೆಯಲ್ಲಿ ಪ್ರತಿದಿನ ಜಗಳ ನಡೆಯುತ್ತಿತ್ತು. ಐಷಾರಾಮಿ ಕುಟುಂಬವಾಗಿದ್ದರು ಸಂಸಾರ ಕಲಹದಿಂದ ಸರ್ವನಾಶವಾಗಿದೆ. ಮೂಲಗಳ ಪ್ರಕಾರ ಸಿಂಧುರಾಣಿ ಮಗು ನಾಮಕರಣ ಮಾಡುವ ವಿಚಾರ ಹಾಗೂ ಮಗಳನ್ನು ಗಂಡನಮನೆಗೆ ಕಳುಹಿಸುವ ವಿಚಾರದಲ್ಲಿ ನಡೆದ ಜಗಳ ಈ ಮಟ್ಟಿಗೆ ಬೆಳೆದಿದೆ ಎಂದು ಹೇಳಲಾಗುತ್ತಿದೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.