
Suresh Angadi-ಮಾಜಿ ಕೇಂದ್ರ ಸಚಿವ ದಿ. ಸುರೇಶ್ ಅಂಗಡಿ ಪ್ರತಿಮೆ ಅನಾವರಣ

ನವದೆಹಲಿ : ಮಾಜಿ ಕೇಂದ್ರ ಸಚಿವ ದಿ. ಸುರೇಶ್ ಅಂಗಡಿಯವರ ನವದೆಹಲಿ ದ್ವಾರಕಾ ನಗರದ ವೀರಶೈವ ಲಿಂಗಾಯತ ದುದ್ರಭೂಮಿಯಲ್ಲಿರುವ ಸಮಾಧಿ ಸ್ಥಳದಲ್ಲಿ ಪ್ರತಿಮೆ ಅನಾವರಣ ಕಾರ್ಯಕ್ರಮ ನಡೆಯಿತು.
ಕಳೆದ 2020 ರಲ್ಲಿ ಕೊರೊನಾ ಸೋಂಕಿನಿಂದ ಅಕಾಲಿಕ ಮರಣಹೊಂದಿದ್ದ ಮಾಜಿ ರೈಲ್ವೆ ಖಾತೆ ರಾಜ್ಯ ಸಚಿವ ದಿ. ಸುರೇಶ್ ಅಂಗಡಿಯವರ ಸಮಾಧಿ ಸ್ಥಳದಲ್ಲಿ ಪ್ರತಿಮೆ ಅನಾವರಣ ಮಾಡಲಾಯಿತು. ಮಂಗಳವಾರ ನವದೆಹಲಿಯ ದ್ವಾರಕಾ ನಗರದ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ಕಾಯಕವೇ ಕೈಲಾಸದ ಬರಹದಲ್ಲಿ ಇವರ ಮೂರ್ತಿಯನ್ನು ಸಕಲ ಪೂಜಾ ವಿಧಿ ವಿಧಾನಗಳಲ್ಲಿ ಅನಾವರಣಗೊಳಿಸಲಾಯಿತು.
ಸರಳವಾಗಿ ನಡೆದ ಪ್ರತಿಮೆ ಅನಾವರಣ ಹಾಗೂ ಪೂಜಾ ಕಾರ್ಯದಲ್ಲಿ ದಿ.ಸುರೇಶ್ ಸಂಗಡಿ ಪತ್ನಿ ಹಾಗೂ ಬೆಳಗಾವಿ ಲೋಕಸಭಾ ಸದಸ್ಯೆ, ಮಂಗಲಾ ಅಂಗಡಿ, ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್, ಸಂಸದರಾದ ಡಿ. ವಿ. ಸದಾನಂದ ಗೌಡ, ಪ್ರತಾಪ್ ಸಿಂಹ, ಉಮೇಶ್ ಜಾಧವ್ ಸೇರಿದಂತೆ ಸುರೇಶ್ ಅಂಗಡಿ ಅಭಿಮಾನಿಗಳು ಹಾಗೂ ಕುಟುಂಬ ವರ್ಗದವರು ಪಾಲ್ಗೊಂಡು ನಮನ ಸಲ್ಲಿಸಿದರು.

ಕಾಯಕ ತತ್ವದ ಅನುಯಾಯಿ ದಿ. ಸುರೇಶ್ ಅಂಗಡಿ : ಇಷ್ಟಲಿಂಗ, ಕಾಯಕ ತತ್ವದ ಜಗಜ್ಯೋತಿ ಬಸವೇಶ್ವರರ ಅನುಯಾಯಿಯಾಗಿದ್ದ ದಿ. ಸುರೇಶ್ ಅಂಗಡಿ ಬದುಕಿನುದ್ದಕ್ಕೂ ಅವರ ತತ್ವ ಆದರ್ಶಗಳನ್ನು ಪಾಲನೆ ಮಾಡಿದವರು. ರಾಜಕೀಯ ಹೊರತಾಗಿ ಹಳ್ಳಿ ಮಕ್ಕಳ ಶಿಕ್ಷಣ ಹಾಗೂ ಬಡಜನರ ಬಗ್ಗೆ ತುಡಿದ ಹೊಂದಿದ್ದರು. ಕೊರೊನಾ ಮಹಾಮಾರಿಯಿಂದ ರಾಜ್ಯ ಒಬ್ಬ ಧೀಮಂತ ರಾಜಕಾರಣಿಯನ್ನು ಕಳೆದುಕೊಂಡು ಮರುಗಿದ್ದು ಈಗ ನೆನಪು.
A Statue of former Union Minister of State for Railways, late Shri Suresh Angadi Ji has been installed on his tomb at Veerashaiva Lingayat Burial ground, Dwaraka in New Delhi.
********************************
ಜಗಜ್ಯೋತಿ ಶ್ರೀ ಬಸವೇಶ್ವರರ ಕಾಯಕ ತತ್ವದ ಅನುಯಾಯಿಯಾಗಿದ್ದ ಹಾಗೂ ಜನರ ಸಂಕಷ್ಟಗಳಿಗೆ ಸದಾಹೀಗೆಮಿಡಿಯುತ್ತಿದ್ದ ಜನನಾಯಕ ಶ್ರೀ ಸುರೇಶ್ ಅಂಗಡಿ ಅವರ ಸಮಾಧಿ ನಿರ್ಮಾಣಕ್ಕೆ ಸಹಾಯಮಾಡಿ ಸಹಕರಿಸಿ, ಕೈಜೋಡಿಸಿದ ಮಾಜಿ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರಿಗೆ ಹಾಗೂ ಅಂತಾರಾಷ್ಟ್ರೀಯ ಬಸವ ಸಮಿತಿಯ ಸದಸ್ಯರಿಗೆ ತುಂಬು ಹೃದಯದ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.
ಮಂಗಲ ಸುರೇಶ್ ಅಂಗಡಿ – ಲೋಕಸಭಾ ಸದಸ್ಯರು ಬೆಳಗಾವಿ