Select Page

ಶಾಲೆ ಪುನಾರಂಭ ದಿನಾಂಕ ‌ಪ್ರಕಟ : ರಜೆ ಕುರಿತು ಬಿಗ್ ಅಪ್ಡೇಟ್!

ಶಾಲೆ ಪುನಾರಂಭ ದಿನಾಂಕ ‌ಪ್ರಕಟ : ರಜೆ ಕುರಿತು ಬಿಗ್ ಅಪ್ಡೇಟ್!



ಬೆಂಗಳೂರು : 2026 – 27 ನೇ ಸಾಲಿನ ಶೈಕ್ಷಣಿಕ‌ ವಾರ್ಷಿಕ ವೇಳಾಪಟ್ಟಿ ಪ್ರಕಟ ಮಾಡಲಾಗಿದ್ದು ಮೇ. 29 ರಿಂದ‌ ರಾಜ್ಯಾದ್ಯಂತ, ಸರಕಾರಿ, ಅನುದಾನಿತ, ಶಾಲೆಗಳ ಪುನಾರಂಭಕ್ಕೆ ದಿನಾಂಕ ‌ನಿಗಧಿ ಮಾಡಲಾಗಿದೆ.

ಈ ಕುರಿತು ಸಂಪೂರ್ಣ ಮಾಹಿತಿಯನ್ನು‌ ಆಯುಕ್ತರು ಬಿಡುಗಡೆ ಮಾಡಿದ್ದಾರೆ. ಶೈಕ್ಷಣಿಕ ವರ್ಷದ ಮೊದಲ ಅವಧಿ ಮೇ. 29 ರಿಂದ ಪ್ರಾರಂಭವಾಗಿ ಅಕ್ಟೋಬರ್ 2 ಕ್ಕೆ ಕೊನೆಯಾಗಲಿದೆ. ನಂತರ ಅಕ್ಟೋಬರ್ 21 ರ ವರೆಗೆ ವಿದ್ಯಾರ್ಥಿಗಳಿಗೆ ದಸರಾ ರಜೆ‌ ನೀಡಲಾಗುತ್ತದೆ.

ಎರಡನೇ ಶೈಕ್ಷಣಿಕ ಅವಧಿ ಅಕ್ಟೋಬರ್ 22 ರಿಂದ 2027 ರ ಎಪ್ರಿಲ್ 10 ರ ವರೆಗೆ ಇರಲಿದೆ. ಒಟ್ಟು 245 ಕರ್ತವ್ಯ ದಿನಗಳಿದ್ದು‌ 119 ರಜಾ ದಿನಗಳಿವೆ. ಬರುವ ಜೂನ್ 30 ರ ಒಳಗಾಗಿ ಮುಂದಿನ ಶೈಕ್ಷಣಿಕ ವರ್ಷದ ದಾಖಲಾತಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!