ಸೂರ್ಯೋದಯ ಮುನ್ನವೇ ರಥೋತ್ಸವ : ಗವಿಮಠದ ಪೂಜ್ಯರ ಅದ್ಬುತ ಪರಿಕಲ್ಪನೆ
ಕೊಪ್ಪಳ : ಕೊರೊನಾ ಮೂರನೇ ಅಲೆಯಿಂದ ರಾಜ್ಯದಲ್ಲಿ ಸೋಂಕಿನ ಪ್ರಕರಣಗಳು ಜಾಸ್ತಿಯಾಗುತ್ತಿರುವ ಸಂದರ್ಭದಲ್ಲಿ ಕೊಪ್ಪಳ ಗವಿಸಿದ್ಧೇಶ್ವರ ಜಾತ್ರೆ ಅತ್ಯಂತ ಸರಳವಾಗಿ ಹಾಗೂ ವಿಭಿನ್ನವಾಗಿ ನೆರವೇರಿದೆ.
ಐತಿಹಾಸಿಕ ಹಿನ್ನಲೆ ಇರುವ ಕೊಪ್ಪಳ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ ಈ ಬಾರಿ ಸೂರ್ಯೋದಯದ ಮುಂಚಿತವಾಗಿ ನಡೆದಿದ್ದು ಮತ್ತೊಂದು ಮೈಲುಗಲ್ಲಿಗೆ ಸಾಕ್ಷಿಯಾಗಿದೆ. ಗವಿಸಿದ್ಧೇಶ್ವರ ಮಠದ ಪೂಜ್ಯರ ಅದ್ಬುತ ಕಲ್ಪನೆಯಿಂದ ಈ ಕಾರ್ಯಕ್ರಮ ಜರುಗಿದ್ದು ತಮ್ಮ ಭಕ್ತರ ಭಾವನೆಗಳ ಜೊತೆಗೆ ಸರ್ಕಾರದ ನಿಯಮವನ್ನು ಪಾಲಿಸಿದ್ದಾರೆ.
ಇಂದು ಬೆಳಗಿನಜಾವ ಸೂರ್ಯ ಉದಯಿಸುವ ಮುಂಚೆ ಸಹಸ್ರಾರು ಭಕ್ತರ ನಡುವೆ ಗವಿಸಿದ್ಧೇಶ್ವರ ಮಹಾ ರಥೋತ್ಸವ ನೆರವೇರಿದೆ. ಜೊತೆಗೆ ಜೈ ಗವಿಸಿದ್ಧ ಎಂಬ ಘೋಷಗಳ ಮಧ್ಯೆ ಅಜ್ಜನ ಜಾತ್ರೆ ಭಕ್ತಿ ಭಾವದಿಂದ ನೆರವೇರಿದೆ. ಒಟ್ಟಿನಲ್ಲಿ ಈ ಬಾರಿ ಗವಿಸಿದ್ಧೇಶ್ವರ ಪೂಜ್ಯರು ಮತ್ತೊಂದು ಇತಿಹಾಸ ನಿರ್ಮಿಸಿದ್ದಾರೆ.
– ಭಾರ್ಗವಿ