ಎಸ್ಸೆಸ್ಸೆಲ್ಸಿ ಮಕ್ಕಳಿಗಾಗಿ ಶಾಸಕ ಸತೀಶ್ ಮಹತ್ವದ ತೀರ್ಮಾನ.!
ಬೆಳಗಾವಿ : ಎಸ್ಸೆಸ್ಸೆಲ್ಸಿ ಮಕ್ಕಳಿಗಾಗಿ ಸತೀಶ ಜಾರಕಿಹೊಳಿ ಫೌಂಡೇಷನ್ ನಿಂದ ಪುಸ್ತಕಗಳನ್ನು ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ವಿತರಿಸಲಾಗುತ್ತಿದ್ದು ಇದರ ಸದುಪಯೋಗವನ್ನು ಎಲ್ಲರು ಪಡೆದುಕೊಳ್ಳಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ಸೋಮವಾರ ನಗರದಲ್ಲಿ ಸತೀಶ ಜಾರಕಿಹೊಳಿ ಫೌಂಡೇಷನ್ ವತಿಯಿಂದ ಎಸ್ಸೆಸ್ಸೆಲ್ಲಿ ವಿದ್ಯಾರ್ಥಿಗಳ ಪರೀಕ್ಷೆ ಸಿದ್ದತೆಗಾಗಿ ಗೆಲುವಿನತ್ತ ನಮ್ಮ ಪಯಣ ಪುಸ್ತಕ ವಿತರಣಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಮೂಡಲಗಿ ತಾಲೂಕು ಟಾಪ್ 10ರಲ್ಲಿ ಬರುತ್ತದೆ. ಒಂದೇ ಪುಸ್ತಕದಲ್ಲಿ ಮೂರು ವಿಷಯಗಳನ್ನು ಒಳಗೊಂಡ ಪುಸ್ತಕವನ್ನು ವಿದ್ಯಾರ್ಥಿಗಳಿಗೆ ವಿತರಣೆ ಮಾಡಾಲಗುತ್ತಿದೆ. ಸುಮಾರು 15 ಸಾವಿರ ಪುಸ್ತಕ ವಿತರಣೆ ಮಾಡಲಿದ್ದೇವೆ ಎಂದರು. ಯಮಕನಮರಡಿ ಶಾಸಕನಾದ ಮೇಲೆ ಶೈಕ್ಷಣಿಕ ಕ್ಷೇತ್ರದಲ್ಲಿ ಹೆಚ್ಚು ಒತ್ತು ನೀಡಲಾಗಿದೆ. ಶಾಲೆ ಮತ್ತು ಪ್ರೌಢಶಾಲೆಯಲ್ಲಿ ನಾಲ್ಕು ಸಾವಿರ ಡೆಸ್ಲ್ ಗಳನ್ನು ವಿತರಣೆ ಮಾಡಲಾಗಿದೆ ಎಂದು ಹೇಳಿದರು.
ಗೋಕಾನಲ್ಲಿ ಪ್ರವಾಹ ಸಂದರ್ಭದಲ್ಲಿ ನಮ್ಮ ಫೌಂಡೇಷನ್ ನಿಂದ ಸಾಕಷ್ಡು ಕೆಲಸ ಮಾಡಿದ್ದೇವೆ. ಪ್ರತಿ ಭಾನುವಾರ ಒಂದೊಂದು ಶಾಲೆಯನ್ನು ಶುಚಿಗೊಳಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸಮಾಜದ ಸೇವೆಯಲ್ಲಿ ಇರುವ ಬಡತನ, ಸಂಸ್ಕಾರ ಮುಖ್ಯವಾಗಿರಬೇಕು. ನಮ್ಮ ಮಕ್ಕಳನ್ನು ಬೇರೆ ಕಡೆ ವಿದ್ಯಾಭ್ಯಾಸ ಕಳುಹಿಸುವ ಬದಲು ಸಾಮಾಜಿಕ ಸೇವೆಯಲ್ಲಿ ತೋಡಗಿಸಿಕೊಳ್ಳುವುದು ಮುಖ್ಯವಾಗಿದೆ ಎಂದರು.
ಮಾಜಿ ಸಚಿವ ಎಂ.ಬಿ.ಪಾಟೀಲ, ಎ.ಬಿ.ಪಾಟೀಲ, ಶಾಸಕರಾದ ಅಂಜಲಿ ನಿಂಬಾಳ್ಕರ್, ಲಕ್ಷ್ಮೀ ಹೆಬ್ಬಾಳ್ಕರ್, ಗಣೇಶ ಹುಕ್ಕೇರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.