ಮೂಡಲಗಿ – ಅಪಾರ ಜನಸ್ತೋಮ ಮಧ್ಯ ಜರುಗಿದ ಯೋಧನ ಅಂತ್ಯಕ್ರೀಯೆ
ಮೂಡಲಗಿ: ಭಾರತೀಯ ಸೇನೆಯ ಲೇನ್ಸನಲ್ಲಿ ಸೇವೆಸಲ್ಲಿಸುತ್ತಿದ ಮೂಡಲಗಿ ಪುರಸಭೆ ವ್ಯಾಪ್ತಿಯ ಗುರ್ಲಾಪೂರ ಗ್ರಾಮದ ಸೈನಿಕ ಪ್ರಕಾಶ ಉದ್ದಪ್ಪ ಇವಕ್ಕಿ(೩೪) ಮಂಗಳವಾರ ರಾತ್ರಿ ಅನಾರೋಗ್ಯದಿಂದ ನಿಧನಹೊಂದಿದ ಯೋಧನ ಅಂತ್ಯಕ್ರೀಯೇ ಗುರುವಾರ ಸಂಜೆ ಗುರ್ಲಾಪೂರ ಗ್ರಾಮದ ರುದ್ರ ಭೂಮಿಯಲ್ಲಿ ಅಪಾರ ಜನಸ್ತೋಮ ಮಧ್ಯ ಜರುಗಿತು.
ಸೈನಿಕ ಪ್ರಕಾಶ ಉದ್ದಪ್ಪ ಇವಕ್ಕಿ(೩೪) ದೆಹಲಿಯ ರಜೇರಿ ಆಸ್ಪತ್ರೆಯಲ್ಲಿ ಒಂದು ವಾರದ ಹಿಂದೆ ದಾಖಲಾಗಿದ್ದು. ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ ನಿಧನರಾಗಿದರು. ಪ್ರಕಾಶ ಅವರ ಪಾರ್ಥಿವ ಶರೀರವನ್ನು ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಬೆಳಗಾವಿಗೆ ತರಲಾಯಿತು. ಬಳಿಕ ಅಲ್ಲಿಂದ ವಿಶೇಷ ಸೇನಾ ವಾಹನದ ಮೂಲಕ ಮೂಡಲಗಿ ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಹತ್ತಿರ ಸಂಗೋಳಿ ರಾಯಣ್ಣ ವೃತ್ತದಲ್ಲಿ ಯೋಧನ ಪಾರ್ಥಿವ ಶರೀರವನ್ನು ಇರಿಸಲಾಗಿತ್ತು.
ಮೂಡಲಗಿ ತಾಲೂಕಾ ದಂಡಾಧಿಕಾರಿಗಳು, ಪೋಲಿಸ್ ಇಲಾಖೆ, ಪುರಸಭೆ ಅಧ್ಯಕ್ಷರು, ಹಾಲಿ ಮತ್ತು ಮಾಜಿ ಸೈನಿಕರು, ಮಂಜುನಾಥ ಸೈನಿಕ ತರಬೇತಿ ಕೇಂದ್ರ, ಕರುನಾಡು ಸೈನಿಕ ತರಬೇತಿ ಕೇಂದ್ರ ಶಿಬಿರಾರ್ಥಿಗಳು ಬರಮಾಡಿಕೊಂಡು ಅಲಂಕರಿಸಿದ ತೇರದ ವಾಹನದಲ್ಲಿ ವಿಷೇಶ ಮೇರವಣಿಗೆ ಮೂಲಕ ಪಟ್ಟಣದ ಮುಖ್ಯ ರಸ್ತೆ ಮೂಲಕ ಗುರ್ಲಾಪೂರ ಗ್ರಾಮಕ್ಕೆ ತೇರಳಿ ಗ್ರಾಮದ ಕಂಬಳಿ ಪ್ಲಾಟದವರಿಗೆ ಮೇರವಣಿಗೆ ನಡೆಸಿ ನಂತರ ಗ್ರಾಂದ ಮಲ್ಲಿಕಾರ್ಜುನ ರಂಗ ಮಂಟಪದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತು.
ತಹಶೀಲ್ದಾರ ಡಿ.ಜಿ.ಮಹಾತ್, ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಗೋಕಾಕ ಡಿವಾಯ್.ಎಸ್.ಪಿ, ಕೆ.ಎಮ್.ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪರವಾಗಿ ಸರ್ವೋತ್ತಮ ಜಾರಕಿಹೊಳಿ, ಆಪ್ತ ಕಾರ್ಯದರ್ಶಿ ನಿಂಗಪ್ಪ ಕುರಬೇಟ, ಬಿ.ಇ.ಒ ಅಜೀತ ಮನ್ನಿಕೇರಿ, ತಾ.ಪಂ ಎಒ ಎಫ್.ಜಿ.ಚಿನ್ನನವರ.
ಸಿಪಿಐ ಶ್ರೀಶೈಲ್ ಬ್ಯಾಕೂಡ, ಪಿಎಸ್‌ಐ ಎಚ್.ವಾಯ್.ಬಾಲದಂಡಿ, ಗಣ್ಯರಾದ ಭೀಮಪ್ಪ ಗಡಾದ, ಬಿ.ಬಿ.ಹಂದಿಗುಂದ, ಎನ್.ಟಿ.ಪಿರೋಜಿ, ಲಕ್ಕನ್ ಸವಸುದ್ದಿ, ಮೂಡಲಗಿ ಪುರಸಭೆ ಸದಸ್ಯರು, ತಾಲೂಕಾ ಮಾಜಿ ಸೈನಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಗ್ರಾಮದ ವಿವಿಧ ಸಂಘ ಸಂಸ್ಥೆಯ ಮುಖ್ಯಸ್ಥರು ಮತ್ತು ಪದಾಧಿಕಾರಿಗಳು, ಶಿಕ್ಷಕರು, ಶಾಲಾ ಮಕ್ಕಳು, ಗ್ರಾಮಸ್ಥರು ಹಾಗೂ ಅಭಿಮಾನಿಗಳು ಯೋಧನ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.
ಹುತಾತ್ಮ ಯೋಧನ ಪಾರ್ಥಿವ ಶರೀರ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಕುಟುಂಬಸ್ಥರ ಮತ್ತು ಗ್ರಾಮದ ಜನತೆಯ ಆಕ್ರಂದನ ಮುಗಿಲು ಮುಟ್ಟಿತು. ನೆರೆದಿದ್ದ ಸಾವಿರಾರೂ ಗ್ರಾಮಸ್ಥರು ಹಾಗೂ ಬೇರೆ ಬೇರೆ ಹಳ್ಳಿಗಳಿಂದ ಬಂದ ಜನರು ಶೋಕದ ಕೋಡಿ ಹರಿಸಿದರು ಮತ್ತು ತಾಯಿ ಪತ್ನಿ, ಸಂಬಂದಿಕರ ಆಕ್ರಂದನಕ್ಕೆ ನೆರೆದವರ ಕಣ್ಣೀರು ತರಿಸಿತು. ಗ್ರಾಮದಲ್ಲಿ ಅಂಗಡಿ ಮುಗ್ಗಟ್ಟುಗಳನ್ನು ಬಂದು ಮಾಡಿ ಯೋಧನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.
ಬೆಳಗಾವಿ ಮರಾಠಾ ಲೈಪ್ ಎಲಿಪಂಟರಿ ರಜಿಮೆಂಟ ಇನಫಂಟ್ರಿಯ ಸೇನಾಧಿಕಾರಿಗಳು ಹಾಗೂ ಸೈನಿಕರು ಮೃತನ ತಾಯಿಗೆ ಮತ್ತು ಪತ್ನಿ ಭಾರತ ಧ್ವಜವನ್ನು ಹಸ್ಥಾಂತರಿಸಿದರು.
ಯೋಧನ ಅಭಿಮಾನಿಗಳು ಅಂತ್ಯಕ್ರಿಯೇ ಸಮಯದಲ್ಲಿ ಸೈನಿಕರಿಂದ ಗಾಳಿಯಲ್ಲಿ ಗುಂಡು ಹಾರಿಸಿ ಗೌರವಿಸಲಿಲ್ಲ ಎಂದು ಸರ್ಕಾರ ಮತ್ತು ಸೇನಾ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.