Select Page

ಫಲಿಸಿತು ಗುಜರಾತ್ ಬಿಜೆಪಿ ತಂತ್ರ : ಬೆಳಗಾವಿಯಲ್ಲಿಯೂ ಹಾಲಿ ಶಾಸಕರಿಗೆ ಟಿಕೆಟ್ ಕೈ ತಪ್ಪುವ ಭೀತಿ

ಫಲಿಸಿತು ಗುಜರಾತ್ ಬಿಜೆಪಿ ತಂತ್ರ : ಬೆಳಗಾವಿಯಲ್ಲಿಯೂ ಹಾಲಿ ಶಾಸಕರಿಗೆ ಟಿಕೆಟ್ ಕೈ ತಪ್ಪುವ ಭೀತಿ

ಬೆಳಗಾವಿ : ಇಡೀ ದೇಶವೇ ಕುತೂಹಲದಿಂದ ಕಾಯುತ್ತಿದ್ದು ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ಚುನಾವಣೆ ಫಲಿತಾಂಶ ಹೊರಬರುತ್ತಿದ್ದು ಗುಜರಾತ್ ನಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಅದರ ಜೊತೆಗೆ ಗುಜರಾತ್ ನಲ್ಲಿ ಬಿಜೆಪಿ ನಡೆಸಿದ್ದ ಕೆಲವು ಬದಲಾವಣೆಗಳಿಂದ ಯಶಸ್ವಿ ಉತ್ತರ ಸಿಕ್ಕಿದ್ದು ಇದು ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿಯೂ ಅಳವಡಿಕೆ ಆಗಲಿದೆ ಎಂಬ ಮಾತು ಕೇಳಿಬರುತ್ತಿದೆ.

ಕಳೆದ 27 ವರ್ಷಗಳಿಂದ ಗುಜರಾತ್ ನಲ್ಲಿ ನಿರಂತರ ಗೆಲುವು ಸಾಧಿಸುತ್ತಿರುವ ಬಿಜೆಪಿ ಈ ಬಾರಿ ಹಲವು ಬದಲಾವಣೆಗಳನ್ನು ಮಾಡಿಕೊಂಡಿತ್ತು. ಸುಮಾರು 37 ಕ್ಕೂ ಅಧಿಕ ಹಾಲಿ ಶಾಸಕರು ಹಾಗೂ ಸಚಿವರು ಸೇರಿದಂತೆ ಅನೇಕರಿಗೆ ಟಿಕೆಟ್ ನಿರಾಕರಿಸಿ ಹೊಸಬರಿಗೆ ಹಂಚಲಾಗಿತ್ತು. ಇದರಿಂದ ಊಹೆ ಮಾಡದ ರೀತಿಯಲ್ಲಿ ಚುನಾವಣಾ ಫಲಿತಾಂಶ ವ್ಯಕ್ತವಾಗಿದ್ದು ಇದರಿಂದ ಬಿಜೆಪಿ ಕರ್ನಾಟಕದಲ್ಲಿಯೂ ಈ ಪ್ರಯತ್ನ ಮುಂದುವರಿಸಬಹುದು.

ಇನ್ನೂ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತಂತ್ರದ ಪ್ರಕಾರ ಬೆಳಗಾವಿ ಜಿಲ್ಲೆಯಲ್ಲಿ ಹಾಲಿ ಬಿಜೆಪಿ ಶಾಸಕರಿಗೆ ಟಿಕೆಟ್ ಕೈತಪ್ಪುವ ಭೀತಿ ಇದ್ದೇ ಇದೆ. ಇದರಿಂದ ಹೊಸ ನಾಯಕತ್ವಕ್ಕೆ ಪಕ್ಷ ಒಲವು ತೋರಿಸಬಹುದು ಎಂಬ ಲಕ್ಷಣ ಎಲ್ಲೆಡೆ ಗೋಚರಿಸುತ್ತದೆ.

ಬೆಳಗಾವಿಯಲ್ಲಿ ಯಾರಿಗೆಲ್ಲ ಟಿಕೆಟ್ ಕೈತಪ್ಪುವ ಭೀತಿ :

ಈ ಬಾರಿ ಬೆಳಗಾವಿ ಜಿಲ್ಲೆಯಲ್ಲಿ ಕೆಲವು ಬಿಜೆಪಿ ಶಾಸಕರಿಗೆ ಟಿಕೆಟ್ ಕೈತಪ್ಪುವ ಭೀತಿ ಎದುರಾಗಿದೆ. ಇದರಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾದ ಒಂದು ಕ್ಷೇತ್ರ ಇದ್ದು, ಆಪರೇಷನ್ ಕಮಲದ ಮೂಲಕ ಬಿಜೆಪಿ ಸೇರ್ಪಡೆಯಾದ ಒಬ್ಬ ಶಾಸಕನಿಗೂ ಟಿಕೆಟ್ ಕೈತಪ್ಪಲಿದೆ. ಜೊತೆಗೆ ಪ್ರತಿಷ್ಠಿತ ಮನೆತನದ ಎರಡು ಕುಡುಂಬಗಳಿಗೂ ಟಿಕೆಟ್ ಕೈತಪ್ಪುವ ಲಕ್ಷಣ ಇದೆ.

ಇನ್ನೂ ಒಟ್ಟು ಕರ್ನಾಟಕದಲ್ಲಿ 42 ಜನರಿಗೆ ಟಿಕೆಟ್ ಕೈ ತಪ್ಪುತ್ತದೆ ಎಂದು ಹೇಳಲಾಗುತ್ತಿದೆ. ಇದಲ್ಲದೆ ಮಾಜಿ‌ ಮುಖ್ಯಮಂತ್ರಿ ಸೇರಿದಂತೆ ಶಾಸಕರು ಹಾಗೂ ಸಚಿವರು ಇದ್ದಾರೆ. ಈಗಾಗಲೇ ಈ ಕುರಿತು ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ನಡೆಸಿದ್ದು ಅಂತಿಮ ಪಟ್ಟಿಯನ್ನು ತಯಾರು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

Advertisement

Leave a reply

Your email address will not be published. Required fields are marked *

error: Content is protected !!