ಬೆಳಗಾವಿ : ಪಂಜಾಬ್ ನಲ್ಲಿ ಭೋಜ ಗ್ರಾಮದ ಯೋಧ ಸಾವು
ನಿಪ್ಪಾಣಿ : ಪಂಜಾಬ್‌ನ ಪಠಾಣ್‌ಕೋಟ ರೈಲು ನಿಲ್ದಾಣದಲ್ಲಿ ನಿಪ್ಪಾಣಿ ತಾಲೂಕಿನ ಭೋಜ ಗ್ರಾಮದ ವಿನಯ ಬಾಬಾಸಾಹೇಬ ಭೋಜೆ (37) ಎನ್ನುವ ಯೋಧ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.ಯೋಧನ
ಸಾವಿನ ಸುದ್ದಿ ಕೇಳಿ ಭೋಜ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ.
ವಿನಯ್ ಭೋಜೆ ಹದಿನೇಳು ವರ್ಷಗಳ ಹಿಂದೆ ಭಾರತೀಯ ಸೇನೆಗೆ ಸೇರ್ಪಡೆಗೊಂಡಿದ್ದರು.
ಕಳೆದ ಹತ್ತು ವರ್ಷಗಳಿಂದ ಅವರು ಮಹಾರಾಷ್ಟ್ರದ ಹಾತಕಣಗಲೆ ತಾಲೂಕಿನ ತಿಲವಾಣಿ ಗ್ರಾಮದಲ್ಲಿ ನೆಲೆಸಿದ್ದರು. ಕಳೆದ ವಾರ ರಜೆಗೆಂದು ತಿಲವಾಣಿಗೆ ಬಂದಿದ್ದರು. ರಜೆ ಮುಗಿಸಿ ಪಠಾಣ್ ಕೋಟ್ ಗೆ ವಾಪಸಾಗಿದ್ದರು. ರೈಲು ನಿಲ್ದಾಣದಲ್ಲಿ ಇಳಿಯುವಾಗ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ಸೈನಿಕ ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.