Select Page

ವಿದ್ಯಾರ್ಥಿನಿ ಬದಲು ಪರೀಕ್ಷೆ ಬರೆದ ಕಾಂಗ್ರೆಸ್ ಕಾರ್ಯಕರ್ತೆ ; ಬಂಧನ

ವಿದ್ಯಾರ್ಥಿನಿ ಬದಲು ಪರೀಕ್ಷೆ ಬರೆದ ಕಾಂಗ್ರೆಸ್ ಕಾರ್ಯಕರ್ತೆ ; ಬಂಧನ

ಕಲಬುರಗಿ : ವಿದ್ಯಾರ್ಥಿನಿ ಬದಲು ಪಿಯುಸಿ ರಾಜ್ಯಶಾಸ್ತ್ರ ಪರೀಕ್ಷೆ ಬರೆದ ಕಾಂಗ್ರೆಸ್ ಕಾರ್ಯಕರ್ತೆಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಲಬುರಗಿಯ ಮಿಲಿಂದ್ ಕಾಲೇಜಿನಲ್ಲಿ ‌ಈ ಘಟನೆ ನಡೆದಿದೆ. ಸಂಘಟನೆ ಕಾರ್ಯಕರ್ತರು ಈ ಕುರಿತು ಪ್ರಶ್ನೆ ಮಾಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ಮಾ. 5 ರಂದು ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಪರೀಕ್ಷೆ ನಡೆದಿತ್ತು. ಈ ವೇಳೆ ಅರ್ಚನಾ ಎಂಬ ವಿದ್ಯಾರ್ಥಿನಿ ಬದಲಿಗೆ ಕಾನೂನು ವಿದ್ಯಾರ್ಥಿನಿ ಹಾಗೂ ಕಾಂಗ್ರೆಸ್ ಕಾರ್ಯಕರ್ತೆ ಆಗಿರುವ ಸಂಪೂರ್ಣ ಪಾಟೀಲ ಪರೀಕ್ಷೆ ಬರೆದಿದ್ದಾರೆ.

ಈ ಕುರಿತು ಮಿಲಿಂದ್ ಕಾಲೇಜಿನ ಪ್ರಾಂಶುಪಾಲರು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಸಧ್ಯ ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಗಮನಿಸಿ : 👇👇👇👇

Advertisement

Leave a reply

Your email address will not be published. Required fields are marked *

error: Content is protected !!